ಸಿಪಿಎಂ ಮುಖಂಡ ಎಂ.ಎಸ್. ಸುಕುಮಾರನ್ ನಿಧನ
ಬದಿಯಡ್ಕ: ಸಿಪಿಎಂ ಬ್ರಾಂಚ್ ಕಾರ್ಯದರ್ಶಿ, ಲೋಕಲ್ ಸೆಕ್ರೆಟರಿ ಯಾಗಿದ್ದ ಎಂ.ಎಸ್. ಸುಕುಮಾರನ್ (೭೦) ನಿಧನಹೊಂದಿದರು. ನಿರ್ಮಾ ಣ ಕಾರ್ಮಿಕರ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿ ಸದಸ್ಯ, ಸಿಐಟಿಯು ಏರಿಯಾ ಸಮಿತಿ ಸದಸ್ಯ ರಾಗಿಯೂ ದುಡಿದಿದ್ದರು. ಅಸೌಖ್ಯ ಹಿನ್ನೆಲೆಯಲ್ಲಿ ಕೆಲವು ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಮಂಗಳವಾರ ಮೃತಪಟ್ಟರು. ಮೂಲತಃ ಕಣ್ಣೂರು ನಿವಾಸಿಯಾದ ಇವರು ೩೦ ವರ್ಷದ ಹಿಂದೆ ಬದಿಯಡ್ಕಕ್ಕೆ ತಲುಪಿ ನೀರ್ಚಾಲು ಏಳ್ಕಾನದಲ್ಲೂ, ಬಳಿಕ ಪಳ್ಳತ್ತಡ್ಕ ಚಾಲಕ್ಕೋಡ್ನಲ್ಲಿ ವಾಸಿಸಿದ್ದರು.ಮೃತರು ಪತ್ನಿ ವತ್ಸಲ ಕೆ.ಪಿ (ಬದಿಯಡ್ಕ ವನಿತಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ), ಮಕ್ಕಳಾದ ಸಿಂಧು, ಶ್ರೀಕಾಂತ್, ಸಂಧ್ಯಾ, ಬಿಂದು, ಅಳಿಯಂದಿರಾದ ಸಾಬು, ಅಭಿಲಾಷ್, ಅನೀಶ್, ಸೊಸೆ ರಜನಿ ಪಿ.ಪಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಕೆ.ಪಿ. ಸತೀಶ್ಚಂದ್ರನ್, ಶಾಸಕ ಸಿ.ಎಚ್. ಕುಂಞಂಬು, ಜಿಲ್ಲಾ ಸಮಿತಿಯ ರಘುದೇವನ್, ಸಿಜಿ ಮ್ಯಾಥ್ಯು, ಸಿ.ಎ. ಸುಬೈರ್ ಸಹಿತ ಹಲವರು ಸಂತಾಪ ಸೂಚಿಸಿದರು.