ಸೇವಾ  ಭಾರತಿಯಿಂದ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಬಳಿಯಲ್ಲಿ ರೈಲು ಡಿಕ್ಕಿಹೊಡೆದು ಮೃತಪಟ್ಟ ಉತ್ತರ ಪ್ರದೇಶದ ಮಣಿಕಾಪುರ್ ನಿವಾಸಿ ಅಜೆಯ್ ಕುಮಾರ್ (36)ರ ಮೃತದೇಹವನ್ನು ಸಂಬAಧಿಕರ ಉಪಸ್ಥಿತಿಯಲ್ಲಿ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ನಿನ್ನೆ ಮಧ್ಯಾಹ್ನ ಚೆರುಗೋಳಿ ರುದ್ರ ಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಸಿದರು. ಮೊನ್ನೆ ಬೆಳಿಗ್ಗೆ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಳಿಕ ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಶವಮಹಜರು ನಡೆಸಿ ಸಂಬAಧಿಕರಿಗೆ ಬಿಟ್ಟುಕೊಡಲಾಗಿತ್ತು. ಮೃತದೇಹವನ್ನು ಊರಿಗೆ ಕೊಂಡುಹೋಗಲು ನಿರ್ಧ ರಿಸಿದ್ದರೂ ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗಲಿಲ್ಲವೆನ್ನಲಾಗಿದೆ. ಬಳಿಕ ಪೊಲೀಸರ ಅನುಮತಿ ಪಡೆದು ಸೇವಾಭಾರತಿ ಕಾರ್ಯಕರ್ತರು ನೇತೃತ್ವ ವಹಿಸಿ ಅಂತ್ಯಸAಸ್ಕಾರ ನಡೆಸಲಾಯಿತು. ಈ ವೇಳೆ ಉಪ್ಪಳದಲ್ಲಿರುವ ಮೃತನ ಸಂಬAಧಿಕರು, ಸ್ನೇಹಿತರು ಹಾಗೂ ಆತನ ಊರವರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page