ಸೈಬರ್ ದಾಳಿ, ವಂಚನೆ: ಕೇರಳದ 69,730 ಸಹಿತ 1.58 ಕೋಟಿ ಮೊಬೈಲ್ ಸಿಮ್ ಕಾರ್ಡ್ ರದ್ದು

ಕಾಸರಗೋಡು: ಸೈಬರ್ ವಂಚನೆ ಮತ್ತು ದಾಳಿಗೆ ಸಂಬAಧಿಸಿ ಕೇಂದ್ರ ದೂರವಾಣಿ ಇಲಾಖೆ ದೇಶಾದ್ಯಂ ತವಾಗಿ 1.58 ಕೋಟಿ ಮೊಬೈಲ್ ಫೋನ್ ಸಂಪರ್ಕಗಳನ್ನು ರದ್ದುಪಡಿಸಿದೆ.
ಹೀಗೆ ರದ್ದುಪಡಿಸಲಾದ ಸಂಪರ್ಕ ಗಳೆಲ್ಲವೂ ನಕಲಿ ಸಿಮ್ ಕಾರ್ಡ್ಗಳನ್ನು ಅಳವಡಿಸಿ ಕಾರ್ಯವೆಸಗುತ್ತಿದ್ದ ಮೊಬೈ ಲ್ ಸಂಪರ್ಕಗಳಾಗಿವೆ. ನಕಲಿ ದಾಖ ಲುಪತ್ರ ಪಡೆದ ಸಿಮ್ ಕಾರ್ಡ್ಗಳನ್ನು ಮತ್ತು ಸೈಬರ್ ವಂಚನೆ, ದಾಳಿ ಇತ್ಯಾದಿ ಗಳಿಗೆ ಸಂಬAಧಪಟ್ಟ ಸಂಪರ್ಕಗಳೂ ರದ್ದುಪಡಿಸಿದುದರಲ್ಲಿ ಒಳಗೊಂಡಿವೆ.
2023 ಮೇ 17ರಿಂದ ನಿನ್ನೆ ತನಕದ ಲೆಕ್ಕಾಚಾರವಾಗಿದೆ ಇದು. ಈ ಅವಧಿಯಲ್ಲ್ಲಿ 69,730 ಸಿಮ್ ಕಾರ್ಡ್ಗಳನ್ನು ಬ್ಲೋಕ್ ಮಾಡಿ ಅವುಗಳನ್ನೂ ರದ್ದುಪಡಿಸಲಾಗಿದೆ.
ಇದರ ಹೊರತಾಗಿ ಸೈಬರ್ ವಂಚನೆ ಮತ್ತು ದಾಳಿ ಇತ್ಯಾದಿ ಸಮಾಜಘಾತಕ ಕೃತ್ಯಗಳಿಗಾಗಿ ಬಳಸಲಾಗುತ್ತಿದ್ದ 1.86 ಲಕ್ಷ ಮೊಬೈಲ್ ಫೋನ್ ಸಂಪರ್ಕಗಳನ್ನು ದೇಶದಾ ದ್ಯಂತವಾಗಿ ಬ್ಲೋಕ್ ಮಾಡಲಾಗಿದ. ಇವುಗಳ ಇಎಂಇಐ ನಂಬ್ರಗಳನ್ನು ರದ್ದುಪಡಿಸಲಾಗಿದ್ದು, ಇದರಿಂದಾಗಿ ಇಂತಹ ಸಿಮ್ ಕಾರ್ಡ್ಗಳನ್ನು ಇನ್ನು ಮುಂದೆ ಉಪಯೋಗಿಸಲು ಸಾಧ್ಯ ವಾಗದು. ಕೇಂದ್ರ ಸರಕಾರದ ‘ಅಸ್ತ್ರ’ ಮೂಲಕ ನಕಲಿಯಾಗಿ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ದೇಶವ್ಯಾಪಕವಾಗಿ ಈಗ ನಡೆಯುತ್ತಿದೆ. ಅದರಂತೆ ನಡೆಸಲಾದ ಕಾರ್ಯಾಚರಣೆಯಲ್ಲಿ ಇಷ್ಟೊಂದು ಸಂಖ್ಯೆಯ ಸಿಮ್ ಕಾರ್ಡ್ಗಳನ್ನು ರದ್ದುಪಡಿಸಿ ಲಕ್ಷಾಂತರ ಮೊಬೈಲ್ ಫೋನ್ ಸಂಪರ್ಕಗಳನ್ನು ಹೀಗೆ ಕಳೆದ ಒಂದು ವರ್ಷದಲ್ಲಿ ಬ್ಲೋಕ್ ಮಾಡಲಾಗಿದೆ.
ಅಸ್ತ್ರ ನಡೆಸಲಾದ ತನಿಖೆಯಲ್ಲಿ ವ್ಯಕ್ತಿಯೋರ್ವ ಹಲವು ರೀತಿಯ 63.46 ಲಕ್ಷ ನಕಲಿ ಸಿಮ್ ಕಾರ್ಡ್ ಗಳನ್ನು ತಯಾರಿಸಿ ವಿತರಿಸಿರುವುದನ್ನು ಪತ್ತೆಹಚ್ಚಲಾಗಿದೆ. ಇದೆಲ್ಲವೂ ನಕಲಿ ದಾಖಲು ಪತ್ರಗಳನ್ನು ನೀಡಿ ಪಡೆಯ ಲಾದ ಸಿಮ್ ಕಾರ್ಡ್ಗಳಾಗಿವೆ. ಅವುಗಳ ನ್ನೆಲ್ಲವನ್ನು ರದ್ದುಪಡಿಸಲಾಗಿದೆ. ಇಂತಹ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.
ಸೈಬರ್ ವಂಚನೆ, ದಾಳಿಗೆ ಮಾತ್ರವಲ್ಲ ಇಂತಹ ನಕಲಿ ಸಿಮ್ ಕಾರ್ಡ್ಗಳನ್ನು ಭಯೋತ್ಪಾದಕರು ಭಯೋತ್ಪಾನಾ ಕೃತ್ಯಗಳಿಗೂ ಬಳಸುತ್ತಿರುವುದಾಗಿಯೂ ಈ ಬಗ್ಗೆ ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳು ತನಿಖೆಯಲ್ಲಿ ಪತ್ತೆಹಚ್ಚಿವೆ.

Leave a Reply

Your email address will not be published. Required fields are marked *

You cannot copy content of this page