ಹಂದಿ ಬೈಕ್‌ಗೆ ಢಿಕ್ಕಿ ಸವಾರ ಮೃತ್ಯು

ಕಲ್ಲಿಕೋಟೆ: ತಿರುವಂಬಾಡಿ ಯಲ್ಲಿ ಕಾಡು ಹಂದಿ ಬೈಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಪೊನ್ನಂಗಯ ಪೋತ್ತಶ್ಶೇರಿಯ ಗೋಪಿ- ವಿಲಾಸಿನಿ ದಂಪತಿ ಪುತ್ರ ಜಿನೀಶ್ (೨೫) ಮೃತಪಟ್ಟವರು. ಕಳೆದ ಆದಿತ್ಯವಾರ ರಾತ್ರಿ ಮುಕ್ಕಂ ತಿರುವಂಬಾಡಿ ರಸ್ತೆಯಲ್ಲಿ ಜಿನೇಶ್ ಸಂಚರಿಸುತ್ತಿದ್ದ ಬೈಕ್‌ಗೆ ಹಂದಿ ಢಿಕ್ಕಿ ಹೊಡೆದಿತ್ತು.

ಮೃತರು ತಂದೆ, ತಾಯಿ, ಸಹೋದರರಾದ ವಿನೀಶ್, ವಿಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page