ಹಣ್ಣು ಹಂಪಲುಗಳ ಬೆಲೆ ಗಗನಕ್ಕೆ: ಗ್ರಾಹಕರು ತೀವ್ರ ಆತಂಕದಲ್ಲಿ
ಕಾಸರಗೋಡು: ಬೇಸಿಗೆಕಾಲ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರುತ್ತಿದೆ. ಇದೇ ಊರಲ್ಲಿ ಬೆಳೆಸಬಹುದಾದ ಹಣ್ಣು ಹಂಪಲುಗಳ ಪೈಕಿ ನೇಂದ್ರ ಬಾಳೆ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಇತ್ತೀಚೆಗೆವರೆಗೆ ಕಿಲೋಕ್ಕೆ 60ರಿಂದ 70 ರೂ.ವರೆಗೆ ಇದ್ದ ನೇಂದ್ರ ಬಾಳೆ ಹಣ್ಣಿಗೆ ಇದೀಗ 80 ರೂಪಾಯಿ ದಾಟಿದೆ. ಇದೇ ವೇಳೆ ಕದಳಿ ಬಾಳೆ ಹಣ್ಣಿಗೂ ಬೆಲೆ 60ರಿಂದ 70ರ ಮಧ್ಯೆ ಇದೆ. ಕಳೆದ ಓಣಂ ಹಬ್ಬದ ಕಾಲದಲ್ಲಿ ನೇಂದ್ರ ಬಾಳೆ ಹಣ್ಣಿಗೆ 60ರಿಂದ 65 ರೂ.ಗಳ ಮಧ್ಯೆ ಇತ್ತು. ಅನಂತರ ಬೇಡಿಕೆ ಹೆಚ್ಚತೊಡಗುತ್ತಿದ್ದಂತೆ ಬೆಲೆಯೂ ಹೆಚ್ಚತೊಡಗಿದೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಬೀಸಿದ ಪಿಲ್ಜಾನ್ ಚಂಡಮಾರುತ ಪರಿಣಾಮ ಉಂಟಾದ ಕೃಷಿನಾಶ ಕೃಷಿಕರಿಗೆ ಭಾರೀ ಹೊಡೆತ ನೀಡಿದೆ. 2.11 ಹೆಕ್ಟೇರ್ ಪ್ರದೇಶದ ಕೃಷಿ ನಾಶಗೊಂಡಿದೆಯೆAದು ಕೃಷಿಕರು ತಿಳಿಸುತ್ತಿದ್ದಾರೆ. ಚಂಡಮಾರುತದಿAದ ಅತೀ ಹೆಚ್ಚು ನಾಶ ಸಂಭವಿಸಿರುವುದು ಬಾಳೆ ಕೃಷಿಗಾಗಿದೆ. ಇದುವೇ ಬೆಲೆಯೇರಿಕೆಗೆ ಪ್ರಧಾನ ಕಾರಣವೆಂದು ಹೇಳಲಾಗುತ್ತಿದೆ.
ಕೇರಳಕ್ಕೆ ಮುಖ್ಯವಾಗಿ ನೇಂದ್ರ ಬಾಳೆಹಣ್ಣು ತಲುಪುತ್ತಿರುವುದು ತಮಿಳು ನಾಡಿನ ತೇನಿ, ಕೃಷ್ಣಗಿರಿ, ನೀಲಗಿರಿ, ಕೊಯಂಬತ್ತೂರು, ಈರೋಡ್ ಪೊಳ್ಳಾಚಿ ಜಿಲ್ಲೆಗಳಿಂದಾಗಿದೆ. ನೇಂದ್ರ ಹಣ್ಣಿನ ಬೆಲೆಯೇರಿಕೆಯಾಗುವುದ ರೊಂದಿಗೆ ಅದರಿಂದ ತಯಾರಿಸುವ ಚಿಪ್ಸ್ ಮೊದಲಾದ ತಿಂಡಿ ತಿನಿಸು ಗಳಿಗೂ ಬೆಲೆಯೇರಿಕೆ ಮಾಡಲಾಗಿದೆ. ಇತರ ಹಣ್ಣು ಹಂಪಲುಗಳ ಬೆಲೆಯೂ ದಿಢೀರನೆ ಹೆಚ್ಚಿದೆ. ಆಪಲ್ಗೆ ಇದೀಗ ಮಾರುಕಟ್ಟೆಯಲ್ಲಿ ಕಿಲೋಗೆ 140ರಿಂದ 300 ರೂ.ವರೆಗೆ ಇದೆ. ದ್ರಾಕ್ಷಿಗೆ 100, ದಾಳಿಂಬೆಗೆ 280ರಿಂದ 300, ಪೇರಳೆಗೆ 120, ಪಪ್ಪಾಯಿಗೆ 50 ರೂ. ಎಂಬೀ ರೀತಿಯಾಗಿದೆ. ಕಿತ್ತಳೆ ಹಣ್ಣಿಗೆ ಮಾತ್ರ 40ರಿಂದ 80 ರೂ. ಮಧ್ಯೆ ಬೆಲೆ ಯಿದೆ. ಅದೇ ರೀತಿ ಕಲ್ಲಂಗಡಿ ಹಣ್ಣಿಗೂ ಕಿಲೋಕ್ಕೆ 25ರಿಂದ 35 ರೂ.ವರೆಗೆ ಏರಿದೆ. ಹಣ್ಣುಹಂಪಲು ಗಳಿಗೆ ಈ ರೀತಿಯಲ್ಲಿ ನಿಯಂತ್ರಣವಿಲ್ಲದೆ ಬೆಲೆಯೇರಿಕೆ ಯಾಗುತ್ತಿರುವುದು ಗ್ರಾಹ ಕರಲ್ಲಿ ತೀವ್ರ ಆತಂಕ ಮೂಡಿಸಿದೆ.