ಹಸಿರು ಚುನಾವಣೆ: ಜಿಲ್ಲಾಧಿಕಾರಿಯಿಂದ ಕರಪತ್ರ ಬಿಡುಗಡೆ

ಕಾಸರಗೋಡು:  ತ್ಯಾಜ್ಯಮುಕ್ತ ನವ ಕೇರಳಂ ಅಭಿಯಾನದ ಅಂಗವಾಗಿ ಸಚಿವಾಲಯ ಮತ್ತು ಹಸಿರು ಕೇರಳ ಸಮನ್ವಯ ಸಮಿತಿಯ ಸಂಯುಕ್ತ ಸಭೆ ನಡೆಯಿತು. ಈ ವೇಳೆ ಚುನಾವಣೆ ಆಯೋಗ ತಯಾರಿಸಿದ ಕರಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಜೇಸನ್ ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು. ನಿಸರ್ಗ ಸ್ನೇಹಿ ವಸ್ತುಗಳನ್ನು ಉಪಯೋಗಿಸಿ ಹಸಿರು ನಿಯಮ ಗಳನ್ನು ಪಾಲಿಸಿ ಎಲ್ಲಾ ವಿಭಾಗದ ಜನರ ಬೆಂಬಲದೊಂದಿಗೆ ಲೋಕಸಭೆ ಚುನಾವಣೆ ನಡೆಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನುಡಿದರು. ಹಸಿರು ಚುನಾವಣೆ ಎಂಬ ಪೋಸ್ಟರನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.

You cannot copy contents of this page