ಹಿರಣ್ಯಪದವಿನಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ 6ರಂದು

ಉಪ್ಪಳ: ಬೇಕೂರು ಹಿರಣ್ಯಪದವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ 6ರಂದು ನಡೆಯಲಿದೆ. ಅಂದು ಬೆಳಿಗ್ಗೆ 6ಕ್ಕೆ ಗಣಹೋಮ, 7ಕ್ಕೆ ಕೊಳ್ಳಿ ಸೇರಿಸುವುದು, ಸಂಜೆ 7ಕ್ಕೆ ಅಗರ್ತಿಮೂಲೆ ತರವಾಡು ಶ್ರೀ ವಿಷ್ಣುಮೂರ್ತಿ ವಯನಾಡು ಕುಲವನ್ ದೈವಸ್ಥಾನದಿಂದ ಭಂಡಾರ ಹೊರಡುವುದು, ರಾತ್ರಿ 8ಕ್ಕೆ ಕೈಕೊಟ್ಟಿ ಕಳಿ, 9ಕ್ಕೆ ಅಗ್ನಿಸ್ಪರ್ಶ, ಅನ್ನಸಂತರ್ಪಣೆ, ಷ್ಡಿಔ್ಣ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸುವರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಬಾಯಾರು ಧಾರ್ಮಿಕ ಭಾಷಣ ಮಾಡುವರು.
ಉತ್ಸವ ಸಮಿತಿ ಅಧ್ಯಕ್ಷ ಕುಂಞÂರಾಮ ಕಾನ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ಉಪನ್ಯಾಸಕ ಧನ್‌ರಾಜ್.ಎ ಸುಭಾಸ್‌ನಗರ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸನ್ನಿಧಿ ಶೆಟ್ಟಿ ರವರನ್ನು ಸನ್ಮಾನಿಸಲಾಗುವುದು. ರಾತ್ರಿ 10.30ಕ್ಕೆ ನೃತ್ಯ ಮತ್ತು ನಾಟಕ, 11.30ಕ್ಕೆ ಕುಳಿZ್ಚÁಟಂ, 12.30ರಿಂದ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತನಿಯಜ್ಜೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 7ರಂದು ಪ್ರಾತಕಾಲ 3.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page