ಹಿರಿಯ ಕಾಂಗ್ರೆಸ್ ಮುಖಂಡ ನಿಧನ
ಮಂಜೇಶ್ವರ: ವರ್ಕಾಡಿ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ, ವ್ಯಾಪಾರಿ ವರ್ಕಾಡಿ ಮಜೀರ್ಪಳ್ಳ ನಿವಾಸಿ ಕೆ.ಕೆ ಜಾಯಿರನ್ [95] ಸ್ವ-ಗೃಹದಲ್ಲಿ ನಿಧನರಾದರು. ಹಲವು ವರ್ಷಗಳ ಕಾಲ ಮಜೀರ್ಪಳ್ಳದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದರು. ಗಾಂಧಿವಾದಿ, ಸಮಾಜ ಸೇವಕರÁಗಿದ್ದರು. ಮೃತರು ಮಕ್ಕಳಾದ ಚಂದ್ರಕಲಾ, ಪ್ರಭಾಕರ.ಕೆ, ದಿವಾಕರ.ಎಸ್.ಜೆ, ಶಶಿಕಲಾ, ಸೊಸೆಯಂದಿರಾದ ಶಕೀಲ, ಮಮತಾ, ಅಳಿಯ ಬಿ.ಎಂ ಶ್ರೀನಿವಾಸ, ಸಹೋದರ ನಾರಾಯಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪತ್ನಿ ಸೀತಮ್ಮ, ಅಳಿಯ ಸುಕುಮಾರ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ವಿವಿಧ ರಾಜಕೀಯ ನೇತಾರರು, ಕಾರ್ಯಕರ್ತರು, ವ್ಯಾಪಾರಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.