ಹೃದಯಾಘಾತ ಯುವಕ ನಿಧನ
ಕಾಸರಗೋಡು: ಸೂರ್ಲು ನಿವಾಸಿಯೂ ಆನೆಬಾಗಿಲುನಲ್ಲಿ ವಾಸಿಸುತ್ತಿದ್ದ ಅಹಮ್ಮದ್ (46) ಹೃದಯಾ ಘಾತದಿಂದ ನಿಧನ ಹೊಂದಿದರು. ಮನೆಯಲ್ಲಿ ಹೃದಯಾಘಾತವುಂಟಾದ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲಾಗಲಿಲ್ಲ.
ಮರ ವ್ಯಾಪಾರಿಯಾಗಿದ್ದ ದಿ| ಮುಹಮ್ಮದ್- ಆಯಿಷಾ ದಂಪತಿಯ ಪುತ್ರನಾದ ಮೃತರು ಪತ್ನಿ ಖಮರುನ್ನಿಸ, ಮಕ್ಕಳಾದ ಸಫ, ಸಜ, ಸಹೋದರ- ಸಹೋದರಿಯರಾದ ತಸ್ನಿ, ಸಫಿಯ, ಸಫೀರ, ಜುನೈದ್, ಜವಾದ್, ಜೌಹಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.