ಹೋಟೆಲ್ ತ್ಯಾಜ್ಯ ಎಸೆಯಲು ಬಂದವರನ್ನು ಕೈಯಾರೆ ಸೆರೆಹಿಡಿದ ನಾಗರಿಕರು
ಹೊಸದುರ್ಗ: ದ್ವಿಚಕ್ರ ವಾಹನ ಗಳಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಎಸೆಯಲು ತಲುಪಿದವರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಕಾಞಂಗಾಡ್ ಐಎಂಎ ಹಾಲ್ ಸಮೀಪ ಘಟನೆ ನಡೆದಿದೆ. ನಾಗರಿಕರು ನೀಡಿದ ಮಾಹಿತಿಯಂತೆ ಸಬ್ ಇನ್ಸ್ಪೆಕ್ಟರ್ ಸಾಜು ಥೋಮಸ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ತ್ಯಾಜ್ಯ ಎಸೆಯಲು ಬಂದವರನ್ನು ಕಸ್ಟಡಿಗೆ ತೆಗೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಕಾಞಂಗಾಡ್ನಲ್ಲಿ ಶವರ್ಮ ಮಾರಾಟ ನಡೆಸುವ ಪಾರಪ್ಪಳ್ಳಿ ಕಾಟಿಪ್ಪಾರದ ಎಂ. ಇಬ್ರಾಹಿಂ, ಪಾಣತ್ತೂರು ಚಾಮುಂಡಿಕುನ್ನುವಿನ ಕೆ.ಎಂ. ಸತ್ತಾರ್ ಎಂಬಿವರ ವಿರುದ್ದ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಹಲವು ತಿಂಗಳು ಗಳಿಂದ ಆನಂದಾಶ್ರಮದಿಂದ ನೆಲ್ಲಿತ್ತರ ಕೋಟ್ಟಪ್ಪಾರವರೆಗೆ ತ್ಯಾಜ್ಯ ಎಸೆದಿರುವುದು ನಿತ್ಯ ಕಂಡುಬರುತ್ತಿದೆ. ಇದು ತೀವ್ರಗೊಂಡಾಗ ನಾಗರಿಕರು ತ್ಯಾಜ್ಯ ಎಸೆಯುವವರ ಪತ್ತೆಹಚ್ಚಲು ರಾತ್ರಿ ಹೊತ್ತಿನಲ್ಲಿ ಕಾದು ನಿಂತಿದ್ದರು.