೮.೬೪ ಲೀಟರ್ ಕರ್ನಾಟಕ ಮದ್ಯ ವಶ: ಯುವತಿ ಸೆರೆ

ಕಾಸರಗೋಡು: ಬೇಳ ನೀರ್ಚಾಲ್‌ನಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಟೇರಿಯ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೬೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ನೀರ್ಚಾಲಿನ ಕ್ವಾರ್ಟ ರ್ಸ್‌ವೊಂದರಲ್ಲಿ ವಾಸಿಸುತ್ತಿರುವ ವಸಂತಿ ಎನ್. (೨೬) ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಜೇಶ್ ಪಿ. ನಾಯರ್, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಗೀತ ಟಿ.ವಿ, ಧನ್ಯ ಟಿ.ವಿ, ಫಸೀಲಾ ಮತ್ತು ಚಾಲಕ ಸುಮೋದ್ ಕುಮಾರ್ ಎಂಬವರು ಒಳಗೊಂಡಿದ್ದರು

You cannot copy contents of this page