ಅಡ್ಕ ಶ್ರೀ ಭಗವತೀ ಕ್ಷೇತ್ರದ ನೂತನ ಸಮಿತಿ ರಚನೆ

ಉಪ್ಪಳ: ಅಡ್ಕ ಶ್ರೀ ಭಗವತೀ ಕ್ಷೇತ್ರದ ಮಹಾಸಭೆ ನಿನ್ನೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿ ಯನ್ನು ರಚಿಸಲಾಯಿತು. ಕ್ಷೇತ್ರಕ್ಕೊಳ ಪಟ್ಟ ಪ್ರತಿ ಗ್ರಾಮಗಳಿಂದ ಕನಿಷ್ಟ ಒಬ್ಬರನ್ನು ಸಮಿತಿಯ ಸದಸ್ಯರನ್ನಾಗಿ ಸೇರಿಸಿಕೊಂಡು ನೂತನ ಆಡಳಿತ ಸಮಿತಿಯನ್ನು ರೂಪಿಕರಿಸಲಾಯಿತು. ಅಧ್ಯಕ್ಷರಾಗಿ ಕೃಷ್ಣ ಪಿ ಅಡ್ಕ , ಉಪಾಧ್ಯ ಕ್ಷರಾಗಿ ಪ್ರಮೋದ್ ಕುಮಾರ್ ಹೇರೂರ್, ಪ್ರದಾನ ಕಾರ್ಯದರ್ಶಿ ಯಾಗಿ ಜಯಂತ ವಿ ಬಂದ್ಯೋಡ್, ಜೊತೆ ಕಾರ್ಯದರ್ಶಿಯಾಗಿ ಅಮಿತ್ ಪರಂಕಿಲ, ಕೋಶಾಧಿಕಾರಿಯಾಗಿ ಚಂದ್ರಶೇಖರ (ಚರಣ್) ಬಂದ್ಯೋಡ್, ಲೆಕ್ಕ ಪರಿಶೊಧಕರಾಗಿ ಶಿವಾನಂದ ಅಂಬಾರ್ ಇವರನ್ನು ಪುನರಾಯ್ಕೆ ಗೊಳಿಸಲಾಯಿತು. ಒಟ್ಟು ೨೫ ಜನರನ್ನು ಒಳಗೊಂಡ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

RELATED NEWS

You cannot copy contents of this page