ಅಪಾಯದಂಚಿನಲ್ಲಿ ಸುದೆಂಬಳ ಸಂಕ : ವಾಹನ ಸಂಚಾರಕ್ಕೆ ಆತಂಕ

ಉಪ್ಪಳ: ಸಂಕದಲ್ಲಿ ಕಬ್ಬಿಣದ ತಡೆಬೇಲಿ ಮುರಿದು ಈ ಮೂಲಕ ಸಂಚಾರ ಭೀತಿ ಉಂಟಾಗಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಬಳ್ಳೂರು- ಕನಿಯಾಳ ಲೋಕೋ ಪಯೋಗಿ ಇಲಾಖೆ ರಸ್ತೆಯ ಸುದೆಂಬಳದ ಲ್ಲಿರುವ ಸಂಕ ಅಪಾಯದಂಚಿನ ಲ್ಲಿದೆ. ರಸ್ತೆ ಅಗಲವಿದ್ದರೂ ಸಂಕ ಕಿರಿದಾಗಿದ್ದು, ಇದರ ಎರಡೂ ಕಡೆಗಳಲ್ಲಿರುವ ಕಬ್ಬಿಣದ ತಡೆಬೇಲಿ ಜೀರ್ಣಾವಸ್ಥೆಯಲ್ಲಿದ್ದು, ಕಾಂಕ್ರೀಟ್ ಬೀಮ್ ಮುರಿದು ಬೀಳುವ ಭೀತಿ ಎದುರಾಗಿದೆ. ಈ ಸಂಕದ ಮೂಲಕ ಬೃಹತ್ ಲಾರಿಗಳು ಸಂಚರಿಸುತ್ತಿದ್ದು,  ಈ ವೇಳೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಉಪ್ಪಳದಿಂದ ಮುಳಿಗದ್ದೆ, ಬಳ್ಳೂರು ದಾರಿಯಾಗಿ ಕನಿಯಾಲಕ್ಕೆ ಬಸ್ ಸಂಚಾರ ಸಹಿತ ನೂರಾರು ವಾಹನಗಳು ಈ ಮೂಲಕ ಸಾಗುತ್ತಿವೆ. ಸಂಕ ಕುಸಿದು ಬಿದ್ದಲ್ಲಿ ಸಂಚಾರ ಮೊಟಕುಗೊಳ್ಳುವ ಭೀತಿ ಇದೆ ಎಂದು ಸಾರ್ವಜನಿಕರು ಸೂಚಿಸಿದ್ದಾರೆ. ಅಪಾಯ ಸಂಭವಿಸುವ ಮೊದಲು ಎಚ್ಚೆತ್ತು ಸಂಕವನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page