‘ಇಂಡಿಯಾ’ ಒಕ್ಕೂಟಕ್ಕೆ ಅಧಿಕಾರ ಬಂದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಜ್ಯಾರಿಗೊಳಿಸದು-ರಮೇಶ್ ಚೆನ್ನಿತ್ತಲ
ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ಜ್ಯಾರಿಗೊಳಿಸಲಾ ಗುವುದಿಲ್ಲವೆಂದು ಕಾಂಗ್ರೆಸ್ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲ ಸ್ಪಷ್ಟಪಡಿಸಿದ್ದಾರೆ.
ಯುಡಿಎಫ್ನ ಕಾಸರಗೋಡು ಲೋಕಸಭಾ ಕ್ಷೇತ್ರದ ಸಮಾವೇ ಶವನ್ನು ಉದ್ಘಾಟಿಸಿ ಅವರು ಮಾತ ನಾಡುತ್ತಿ ದ್ದರು. ಮತ ಬ್ಯಾಂಕನ್ನು ಮುಂದಕ್ಕೆ ಕಂಡುಕೊಂಡು ರಾಜಕೀ ಯ ಲಾಭ ಗಿಟ್ಟಿಸಿಕೊಳ್ಳುವ ಬಿಜೆಪಿಯ ಇಂತಹ ಯತ್ನವನ್ನು ಕೇರಳದಲ್ಲಿ ಜ್ಯಾರಿಗೊಳಿಸ ಲಾಗುವುದು. ಇದರ ಪರಿಣಾಮ ಲೋಕಸಭಾ ಚುನಾವಣೆ ಯಲ್ಲಿ ಪ್ರತಿಫಲಿ ಸಲಿದೆ. ಧರ್ಮವಿಕೇಂ ದ್ರೀಕೃತ ವಿರುದ್ಧ ಬಿಜೆಪಿ ದಾಳಿ ನಡೆಸತೊಡಗಿದೆ. ಆ ಮೂಲಕ ಆ ಪಕ್ಷ ದೇಶದ ಜನತೆ ಯನ್ನು ವಿಭಜಿಸುವ ಯತ್ನ ನಡೆಸುತ್ತಿದೆ ಯೆಂದು ಅವರು ಹೇಳಿದರು. ಯುಡಿಎಫ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು.