ಎಡರಂಗ ಪೈವಳಿಕೆ ಲೋಕಲ್ ಚುನಾವಣಾ ಸಮಿತಿ ಕಚೇರಿ ಉದ್ಘಾಟನೆ
ಪೈವಳಿಕೆ: ಎಡರಂಗ ಪೈವಳಿಕೆ ಲೋಕಲ್ ಚುನವಣಾ ಸಮಿತಿ ಕಚೇರಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿ ಸಿದರು. ಎಡರಂಗ ಪೈವಳಿಕೆ ಲೋಕಲ್ ಸಮಿತಿ ಚಯರ್‌ಮೆನ್ ಲಾರೆನ್ಸ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂ ಸಿ ಲಾಲ್ ಬಾಗ್, ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಚಿಪ್ಪಾರು, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ. ಕೆ, ಸಿಪಿಎಂ ಏರಿಯಾ ಸಮಿತಿ ಸದಸ್ಯ ಪುರುಷೋತ್ತಮ ಬಳ್ಳೂರು, ವಿನಯ್ ಕುಮಾರ್, ಅಬ್ದುಲ್ಲಾ.ಕೆ, ಸಿಪಿಐ ಪೈವಳಿಕೆ ಲೋಕಲ್ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ಮಾತನಾಡಿದರು. ಅಬ್ದುಲ್ ಹಾರಿಸ್ ಪೈವಳಿಕೆ ಸ್ವಾಗತಿಸಿದರು.