ಕಳವು ನಡೆಸಿದ ಸಾಮಗ್ರಿಗಳನ್ನು ಮುಖ್ಯೋಪಾಧ್ಯಾಯರ ಮನೆ ಬಳಿ ಉಪೇಕ್ಷಿಸಿ ಕ್ಷಮೆ ಕೇಳಿದ ಕಳ್ಳ
ತಿರುವನಂತಪುರ: ಶಾಲೆಯಿಂದ ಕಳವುಗೈದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿ ಮುಖ್ಯೋಪಾಧ್ಯಾಯರ ಮನೆಯ ಸಮೀಪ ಉಪೇಕ್ಷಿಸಿ ಕ್ಷಮಾಪಣೆಯ ಪತ್ರ ಕಳ್ಳ ಅಲ್ಲೇ ಇರಿಸಿದ ಘಟನೆ ನಡೆದಿದೆ. ವಾಳಮುಟ್ಟಂ ಸರಕಾರಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿಯಾದ ವೆಂಗಾನೂರ್ ಪನಂಗೋಡು ನಿವಾಸಿಯಾದ ಶ್ರೀಜಾರ ಮನೆಯ ಮುಂದೆ ಗೋಣಿ ಇರಿಸಿದ್ದು, ಕ್ಷಮೆ ಕೇಳಿ ಗೋಡೆಗೆ ಪತ್ರವನ್ನು ಅಂಟಿಸಿದ್ದಾನೆ. ‘ಟೀಚರ್ ನನ್ನನ್ನು ಕ್ಷಮಿಸಿ, ಇನ್ನು ಮುಂದೆ ಯಾವತ್ತೂ ಹೀಗೆ ಮಾಡೋದಿಲ್ಲ. ನನ್ನ ಮನೆಯವರಿಗೆ ಇದು ತಿಳಿದಿಲ್ಲ. ಕೇಸು ನೀಡಿ ಜನರಿಗೆ ತಿಳಿಸಿ ನನ್ನ ಮಾನ ಕಳೆಯಬಾರದು’ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಟೀಚರ್ ಈ ವಿಷಯವನ್ನು ಕೋವಳಂ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ತಲುಪಿ ಹೋಗಿ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಸಹಿತದ ಸಾಮಗ್ರಿಗಳು ಕಂಡು ಬಂದಿದೆ. ಬಳಿಕ ಅದನ್ನು ಠಾಣೆಗೆ ಕೊಂಡುಹೋಗಲಾಗಿದೆ. ಜನವರಿ ೧ರಂದು ಕಳವು ನಡೆದಿತ್ತು.