ಕಾಲೇಜು ಕಳವು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಪೆರ್ಲ: ಇಲ್ಲಿಗೆ ಸಮೀಪದ ದೇವಲೋಕ ಎಂಬಲ್ಲಿನ ಸೈಂಟ್ ಗ್ರಿಗೋರಿಯಸ್ ಕಾಲೇಜಿನಿಂದ ಕಳವುಗೈಯ್ಯಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಮೊನ್ನೆ ರಾತ್ರಿ ಕಾಲೇಜಿನಿಂದ ಕಳವು ಯತ್ನ ನಡೆದಿದ್ದು, ಕಾವಲುಗಾರ ಇವರನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಶೇಣಿ ಬಲ್ತಕಲ್ಲು ನಿವಾಸಿ ಸುಧೀರ್ (26), ಕಾಟುಕುಕ್ಕೆಯ ರವಿ ಪ್ರಸಾದ್ (25) ಬಂಧಿತರಾ ಗಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಲೇಜಿಗೆ ತಲುಪಿದ ಇಬ್ಬರು ಗೋಡೆಯಿಂದ ಕಿಟಿಕಿ ಕಳಚಿ ತೆಗೆದು ಕಬ್ಬಿಣವನ್ನು ಬೇರ್ಪಡಿಸು ತ್ತಿದ್ದಾಗ ಶಬ್ದ ಕೇಳಿ ಕಾವಲುಗಾರ ಅಲ್ಲಿಗೆ ತೆರಳಿದ್ದು, ಇಬ್ಬರನ್ನು ಸೆರೆ ಹಿಡಿದಿದ್ದರು. ಬಳಿಕ ಪೊಲೀಸರು ತಲುಪಿ ಅವರನ್ನು ಕಸ್ಟಡಿಗೆ ತೆಗೆದಿದ್ದರು.