ಕಾಸರಗೋಡು ನಗರದ ರಸ್ತೆಯಲ್ಲಿ ಪಾತಾಳ ಹೊಂಡ

ಕಾಸರಗೋಡು: ನಗರದ ಪ್ರಧಾನ ರಸ್ತೆಗಳಲ್ಲೊಂದಾದ ಬ್ಯಾಂಕ್ ರಸ್ತೆಯಲ್ಲಿ  ಪಾತಾಳ ಹೊಂಡ ಪ್ರತ್ಯಕ್ಷಗೊಂಡಿದೆ. ಇಂದು ಬೆಳಿಗ್ಗೆ ಜನಾರ್ದನ ಆಸ್ಪತ್ರೆ ಮುಂಭಾಗದಲ್ಲಿ ಈ ಹೊಂಡ ಕಂಡು ಬಂದಿದೆ. ನಿನ್ನೆ ರಾತ್ರಿವರೆಗೆ ಈ ಸ್ಥಳದಲ್ಲಿ ಇಂತ ದೊಂದು ಹೊಂಡ ಇರಲಿಲ್ಲವೆಂದು ಸ್ಥಳೀಯರು ತಿಳಿಸುತ್ತಿದ್ದಾರೆ. ಡಾಮರು ಸಹಿತದ ರಸ್ತೆಯ ಭಾಗ ಕುಸಿದು ಹೊಂಡ ರೂಪುಗೊಂಡಿದೆ. ಅಪಾಯ ಸಾಧ್ಯತೆ ಮನಗಂಡು ಸ್ಥಳದಲ್ಲಿ ವ್ಯಾಪಾರಿಗಳು ಜನರ ಗಮನ ಸೆಳೆಯಲು ಸೀಯಾಳದ ಸಿಪ್ಪೆಗಳನ್ನು ಗೋಣಿಯಲ್ಲಿ ತುಂಬಿಸಿ ಇಲ್ಲಿ ತಂದಿರಿಸಿದ್ದಾರೆ. ರಸ್ತೆ ಕುಸಿ ಯಲು ಕಾರಣವೇನೆಂದು ಸ್ಪಷ್ಟಗೊಂಡಿಲ್ಲ. ಅಪಾಯಭೀತಿ ದೂರೀಕರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page