ಕೂಲಿ ಕಾರ್ಮಿಕ  ಬಸ್ ತಂಗುದಾಣದಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ವ್ಯಕ್ತಿ  ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ಳೂರು ಬಳಿಯ ನೆಟ್ಟಣಿಗೆಯಲ್ಲಿ ಸಂಭವಿಸಿದೆ. ಕಿನ್ನಿಂಗಾರು ಮದಕ್ಕ ನಿವಾಸಿ ಕುಂಞ ( 50) ಎಂಬವರು ಮೃತ ಪಟ್ಟ ವ್ಯಕ್ತಿ.   ಕೂಲಿ ಕಾರ್ಮಿಕ ನಾದ ಇವರು ಇಂದು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ತಿಳಿಸಿ ತೆರಳಿದ್ದರೆನ್ನಲಾಗಿದೆ. 8 ಗಂಟೆ ವೇಳೆ ಇವರು ನೆಟ್ಟಣಿಗೆಯಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿ ರುವುದನ್ನು ಸ್ಥಳೀಯರು ಕಂಡಿದ್ದಾರೆ. ಕೂಡಲೇ ಸಮೀಪಕ್ಕೆ ತೆರಳಿ ನೋಡಿ ದಾಗ ಪ್ರಜ್ಞಾಹೀನ   ಸ್ಥಿತಿಯಲ್ಲಿದ್ದರೆನ್ನ ಲಾಗಿದೆ. ಈ ಬಗ್ಗೆ  ಮಾಹಿತಿ ಲಭಿಸಿದ ಮನೆಯವರು ತಲುಪಿ  ಆಂಬುಲೆನ್ಸ್ ನಲ್ಲಿ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಮೃತಪಟ್ಟಿದ್ದಾರೆ.  ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಅಂದಾ ಜಿಸಲಾಗಿದೆ.  ಮೃತರು ಪತ್ನಿ ಗೀತ, ಮಕ್ಕಳಾದ ಶ್ರೀಕಾಂತ್, ವಂದನ, ಅಶ್ವಿತ, ಕೃತಿಕ, ಸಹೋದರ ಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page