ಕೆಪಿಎಸ್ಟಿಎ ಜಿಲ್ಲಾ ಸಮ್ಮೇಳನ ನಾಳೆಯಿಂದ
ಕಾಸರಗೋಡು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್ಟಿಎ) ಇದರ ಜಿಲ್ಲಾ ಸಮ್ಮೇಳನ 18, 19ರಂದು ಪಾಲಕುನ್ನು ಮಾಶ್ ಆಡಿಟೋರಿಯಂನಲ್ಲಿ ನಡೆಯಲಿದೆ. ಕಾರ್ಯಕ್ರಮದಂಗವಾಗಿ 18ರಂದು ಬೆಳಿಗ್ಗೆ ರೆವೆನ್ಯೂ ಜಿಲ್ಲಾ ಕೌನ್ಸಿಲ್ ಸಭೆ, ಬಳಿಕ 11 ಗಂಟೆಗೆ ಆರಂಭಗೊಳ್ಳುವ ಪ್ರತಿನಿಧಿ ಸಮ್ಮೇಳನವನ್ನು ಕೆಪಿಎಸ್ಟಿಎ ರಾಜ್ಯ ಉಪಾಧ್ಯಕ್ಷ ಕೆ. ರಮೇಶ್ ಉದ್ಘಾಟಿಸುವರು. ಜಿಲ್ಲಾಧಕ್ಷ ಕೆ.ವಿ. ವಾಸುದೇವನ್ ನಂಬೂದಿರಿ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಮಾತನಾಡುವರು.
ಅಪರಾಹ್ನ ೨ ಗಂಟೆಗೆ ಸರ್ಗಾಲಯಂ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅದನ್ನು ಅನಿಲ್ ನೀಲಾಂಭರಿಯವರ ಅಧ್ಯಕ್ಷತೆಯಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕ ಡಾ. ಮಣಕ್ಕಾಲ ಗೋಪಾಲಕೃಷ್ಣನ್ ಉದ್ಘಾಟಿಸುವರು. ಜ.೧೯ರಂದು ಬೆಳಿಗ್ಗೆ 10.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೆ.ವಿ. ವಾಸುದೇವನ್ ನಂಬೂದಿರಿಯವರ ಅಧ್ಯಕ್ಷತೆಯಲ್ಲಿ ಕೆ.ಪಿ.ಎಸ್.ಟಿ.ಎ ರಾಜ್ಯಾಧ್ಯಕ್ಷ ಕೆ. ಅಬ್ದುಲ್ ಮಜೀದ್ ಉದ್ಘಾಟಿಸುವರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಿ.ಕೆ. ಗಿರೀಶ್ ಮುಖ್ಯ ಅತಿಥಿಯಾಗಿರುವರು. ಮಧ್ಯಾಹ್ನ 12 ಗಂಟೆಗೆ ಟಿ. ರಾಜೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಮ್ಮೇಳನ ನಡೆಯಲಿದ್ದು, ಡಾ. ಖಾದರ್ ಮಾಂಙಾಡ್ ಉದ್ಘಾಟಿಸುವರು. ಪಿ.ವಿ. ಜ್ಯೋತಿ ಪ್ರಧಾನ ಭಾಷಣ ಮಾಡುವರು. ಮಧ್ಯಾಹ್ನ ೨ ಗಂಟೆಗೆ ಸಿ.ಎಂ. ವರ್ಗೀಸ್ರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಉದ್ಘಾಟಿಸುವರು. ಹಲವು ಗಣ್ಯರು ಭಾಗವಹಿಸಿ ಮಾತನಾಡುವರು.