ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಕ್ರೀಡಾಕೂಟ

ಕುಂಬಳೆ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕ್ರೀಡಾಕೂಟ ಕುಂಬಳೆ ಜಿ.ಎಸ್.ಬಿ.ಎಸ್ ಶಾಲಾ ಮೈದಾನ ದಲ್ಲಿ ಜರಗಿತು. ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟವನ್ನು ಕುಂ ಬಳೆ ಶಾಲಾ ಮುಖ್ಯೋಪಧ್ಯಾಯ ವಿಜಯಕುಮಾರ್ ಪಿ ಉದ್ಘಾಟಿಸಿದರು. ಕನ್ನಡ ಅಧ್ಯಾಪಕರ ಒಗ್ಗಟ್ಟಿಗೆ ಈ ಕ್ರೀಡಾ ಕೂಟ ಸಹಕಾರಿಯಾಗಲಿಯೆಂದು ಅವರು ನುಡಿದರು. ನಿವೃತ್ತ ದೈಹಿಕ ಶಿಕ್ಷಕ ಶಶಿಕಾಂತ್ ಬಲ್ಲಾಳ್, ವೆಂಕಟ ರಮಣ ಭಟ್ ರಾಜ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡು ಗಡೆಗೊಳಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಉಮೇಶ, ಪ್ರಭಾವತಿ ಕೆದಿಲಾಯ, ಅಧಿಕೃತ ವಕ್ತಾರ ಸುಕೇಶ, ಕೋಶಾಧಿಕಾರಿ ಶರತ್ ಕುಮಾರ್ , ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ, ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್ ಕೆ.ವಿ ವಂ ದಿಸಿದರು. ಸಂಘಟನಾ ಕಾರ್ಯದರ್ಶಿ ಜಬ್ಬಾರ್ ನಿರೂಪಿಸಿದರು.

RELATED NEWS

You cannot copy contents of this page