ಗುಡ್ಡೆ ಕುಸಿತ: ಚೆರ್ಕಳ-ಚಟ್ಟಂಚಾಲ್ ಹೆದ್ದಾರಿಯಲ್ಲಿ ಸಾರಿಗೆ ಅಡಚಣೆ
ಕಾಸರಗೋಡು: ಚೆರ್ಕಳ-ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಮಣ್ಣು ತೆಗೆದ ಕುಂಡಡ್ಕ ರಸ್ತೆ ಸಮೀಪದಲ್ಲಿ ಇಂದು ಬೆಳಿಗ್ಗೆ ಗುಡ್ಡೆ ಕುಸಿದಿದೆ. ಈ ಭಾಗದಲ್ಲಿ ನಿನ್ನೆ ಸಂಜೆ ಬಿರುಕು ಕಾಣಿಸಿಕೊಂಡಿತ್ತು. ಅಪಾಯ ಭೀತಿ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬದಲಾಗಿ ವಾಹನಗಳನ್ನು ಚಂದ್ರಗಿರಿ ಸೇತುವೆ, ಕೋಳಿಯಡ್ಕ ಮೂಲಕ ಬಿಡಲಾ ಗುತ್ತಿದೆ. ರಸ್ತೆಗೆ ಕುಸಿದು ಬಿದ್ದ ಮಣ್ಣು ತೆರವು ಕಾರ್ಯ ಆರಂಭಿಸಲಾಗಿದೆ.