ಚಿರಂಜೀವಿ ಕುಂಬಳೆ ವಾರ್ಷಿಕ ಸಭೆ: ಪದಾಧಿಕಾರಿಗಳ ಆಯ್ಕೆ
ಕುಂಬಳೆ: ಚಿರಂಜೀವಿ ಕುಂಬಳೆ ಇದರ ವಾರ್ಷಿಕ ಸಭೆ ಕ್ಲಬ್‌ನಲ್ಲಿ ನಡೆಯಿತು. ಅಧ್ಯಕ್ಷ ಕೃಷ್ಣ ಕುಂಬಳೆ ಅಧ್ಯಕ್ಷತೆ ವಹಿಸಿದರು. ಗೋಪಿ ಸ್ವಾಗತಿಸಿದರು. ನವೀನ್ ಗಟ್ಟಿ ವರದಿ ವಾಚಿಸಿದರು. ಕ್ಲಬ್‌ನ ೪೦ನೇ ವಾರ್ಷಿಕ ಆಚರಣೆ ಬಗ್ಗೆ ಚರ್ಚೆ ನಡೆಯಿತು. ವಾರ್ಷಿಕದ ಅಂಗವಾಗಿ ಕುಂಬಳೆ ಜಿಎಸ್ ಬಿಎಸ್‌ಗೆ ನೀರಿನ ಟ್ಯಾಂಕ್ ನೀಡಲು ಹಾಗೂ ಕ್ಯಾನ್ಸರ್ ಶಿಬಿರ ನಡೆಸಲು ತೀರ್ಮಾ ನಿಸಲಾಯಿತು. ಎಪ್ರಿಲ್ ೨೫ರಿಂದ ೩೦ರವರೆಗೆ ನಡೆಯುವ ಕುಂಬಳೆ ಅಯ್ಯಪ್ಪ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಭಕ್ತಿಗಾನಸುಧಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಹಾಗೂ ಕ್ಲಬ್ ಸದಸ್ಯರ ಪ್ರವಾಸ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಕ್ಲಬ್‌ನ ನೂತನ ಅಧ್ಯಕ್ಷರಾಗಿ ಕೃಷ್ಣ ಕುಂಬಳೆ, ಉಪಾಧ್ಯಕ್ಷರಾಗಿ ಮನೋಜ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಜೇಶ್, ಜತೆ ಕಾರ್ಯದರ್ಶಿಯಾಗಿ ನವೀನ್ ಗಟ್ಟಿ, ಕೋಶಾಧಿಕಾರಿಯಾಗಿ ಗೋಪಿ ಎಂಬಿವ ರನ್ನು ಆರಿಸಲಾಯಿತು. ಇದೇ ವೇಳೆ ಚಿರಂ ಜೀವಿಯ ಮಹಿಳಾ ಸಭೆ ನಡೆಸಿ ನೂತನ ಸಮಿತಿ ರೂಪೀಕರಿಸಲಾಯಿತು.