ಬದಿಯಡ್ಕದಲ್ಲಿ ಹಲ್ಲೆ:5 ಮಂದಿ ಸೆರೆ
ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ತರಕಾರಿ ವ್ಯಾಪಾರಿ ಹಾಗೂ ಬಾರ್ಬರ್ ಶಾಪ್ ಮಾಲಕನ ಮಧ್ಯೆ ಉಂಟಾದ ತರ್ಕದ ಮುಂದು ವರಿಕೆಯಾಗಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಬದಿಯಡ್ಕದ ತರಕಾರಿ ವ್ಯಾಪಾರಿ ಚೆಡೇಕಲ್ನ ಶರೀಫ್ರ ದೂರಿನಂತೆ ಬಾರ್ಬರ್ ಶಾಪ್ ಮಾಲಕ ರಾಜೇ ಶ್, ಸಹೋದರ ರಂಜಿತ್, ಮುನ್ನ, ಗಿರೀಶ್ ಎಂಬಿವರನ್ನು ಹಾಗೂ ರಂಜಿತ್ರ ದೂರಿನಂತೆ ಸಕರಿಯಾ ಎಂಬಿವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಅವರಿಗೆ ರಿಮಾಂಡ್ ವಿಧಿಸಲಾಗಿದೆ. ಇವರ ವಿರುದ್ಧ ನರಹತ್ಯಾಯತ್ನ ಕೇಸು ದಾಖಲಿ ಲಾಗಿದೆ. ಸೋಮವಾರ ರಾತ್ರಿ ೯.೩೦ರ ವೇಳೆ ಹಲ್ಲೆ ಪ್ರಕರಣ ನಡೆದಿದೆ.
ಶರೀಫ್ ಹಾಗೂ ಬಾರ್ಬರ್ ಶಾಪ್ ಮಾಲಕ ರಾಜೇಶ್ ಮಧ್ಯೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಸಕರಿಯಾ, ರಂಜಿತ್ ಹಾಗೂ ಮತ್ತಿಬ್ಬರು ಮಧ್ಯಪ್ರವೇಶಿಸಿದಾಗ ಹೊಡೆದಾಟ ನಡೆದಿತ್ತು. ಇದರಿಂದ ಗಾಯಗೊಂಡ ಶರೀಫ್, ತರಕಾರಿ ಅಂಗಡಿ ನೌಕರ ಸಕರಿಯಾ ಎಂಬಿ ವರನ್ನು ಚೆಂಗಳದ ನಾಯನಾರ್ ಆಸ್ಪತ್ರೆಯಲ್ಲಿ, ರಾಜೇಶ್, ರಂಜಿತ್ ಎಂಬಿವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದರು.