ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷರ ಪದಗ್ರಹಣ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಎಂ ಗೋಪಾಲಕೃಷ್ಣ ರವರ ಪದಗ್ರಹಣ ಕಾರ್ಯಕ್ರಮ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಿತು. ಮಾಜಿ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು ನೇತಾರರಾದ ಎಂ ಸಂಜೀವ ಶೆಟ್ಟಿ, ಸುಧಾಮ ಗೋಸಾಡ ,ರಾಮಪ್ಪ ಮಂಜೇಶ್ವರ, ಶಿವ ಕೃಷ್ಣ ಭಟ್, ಎನ್. ಸತೀಶ್, ಮಣಿಕಂಠ ರೈ ,ಶೈಲಜಾ ಭಟ್, ವಸಂತ ಶೆಟ್ಟಿ ಈಶ್ವರ, ಥೋಮಸ್ ಬೆಳ್ಳೂರು, ಗೀತಾ ಬೆಳ್ಳೂರು ಚಿತ್ರಕಲ,ರೋಮನ್ ಡಿಸೋಜ ಬಿಎಂಎಸ್‌ನ ಲೀಲ ಕೃಷ್ಣ ಮುಳ್ಳೇರಿಯ, ಸದಾಶಿವ, ಸಾಮಾಜಿಕ ಕಾರ್ಯಕರ್ತ ದೀನನಾಥ, ಹರೀಶ್ ಗೋಸಾಡ, ಜಯಚಂದ್ರ, ರಮೇಶ್ ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್ ಸ್ವಾಗತಿಸಿ, ರವೀಂದ್ರ ರೈ ಗೋಸಾಡ ವಂದಿಸಿದರು

RELATED NEWS

You cannot copy contents of this page