ಬೆಳ್ಳೂರಿನಲ್ಲಿ ಕುಡಿಯುವ ನೀರು ಯೋಜನೆ ಉದ್ಘಾಟನೆ

ಬೆಳ್ಳೂರು: ಬೆಳ್ಳೂರು ಪಂ. 8ನೇ ವಾರ್ಡ್  ತೋಟದಮೂಲೆ ಎಸ್‌ಸಿ ನಗರದ ೨೫ ಮನೆಗಳಿಗೆ ಮಂಜೂರಾದ  ಕುಡಿಯುವ ನೀರು ಯೋಜನೆ ಉದ್ಘಾಟಿಸಲಾಯಿತು. ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಶಿಜಿ ಮ್ಯಾಥ್ಯೂ ಉದ್ಘಾಟಿಸಿದರು.  ವಾರ್ಡ್ ಪ್ರತಿನಿಧಿ ಶ್ರೀಪತಿ ಅಧ್ಯಕ್ಷತೆ ವಹಿಸಿದ್ದರು. ಉಷಾ ಸ್ವಾಗತಿಸಿದರು. ಸಿಪಿಎಂ ಲೋಕಲ್ ಸಮಿತಿ ಕಾರ್ಯದರ್ಶಿ ಕೆ.ಎಚ್. ಸೂಫಿ ಕಿನ್ನಿಂಗಾರು, ಕುಡಿಯುವ ನೀರು ಫಲಾನುಭವಿ ಸಮಿತಿ ಅಧ್ಯಕ್ಷ ಕೃಷ್ಣ ಕೆ.ಕೆ, ಕಾರ್ಯದರ್ಶಿ ಪದ್ಮನಾಭ ಟಿ ಮತ್ತಿತರರು ಭಾಗವಹಿಸಿದ್ದರ. ರಾಜ್ಯಸಭೆಯ  ಮಾಜಿ ಸದಸ್ಯ ಎಳಮರಂ ಕರೀಂ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾದ 15 ಲಕ್ಷ ರೂ. ಅನುದಾನದಲ್ಲಿ   ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ.

You cannot copy contents of this page