ಮಲಿನ ಜಲ, ತ್ಯಾಜ್ಯ ಸಾರ್ವಜನಿಕ ಸ್ಥಳದಲ್ಲಿ ಉಪೇಕ್ಷೆ: ಸಂಸ್ಥೆಗಳಿಂದ ದಂಡ ವಸೂಲಿ
ಕುಂಬಳೆ: ರೈಲ್ವೇ ನಿಲ್ದಾಣ ಪರಿಸರದಲ್ಲಿ ರೈಲ್ವೇಯ ವಶದಲ್ಲಿರುವ ಸ್ಥಳದಲ್ಲಿ ವ್ಯಾಪಾರ ಸಂಸ್ಥೆಗಳ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ರಾಶಿ ಹಾಕಿ ಮಲಿನಗೊಳಿಸಿರುವುದರ ಹಿನ್ನೆಲೆಯಲ್ಲಿ ಕುಂ ಬಳೆಯ ಸೆರಾಮಿಕ್ಸ್ ಮಾಲಕನಿಗೆ ಸ್ಪೆಷಲ್ ಎನ್ ಫೋರ್ಸ್‌ಮೆಂಟ್ ಸ್ಕ್ವಾಡ್ ೫೦೦೦ ರೂ. ದಂಡ ಹೇರಿದೆ. ರೈಲ್ವೇ ಪರಿಸರದಲ್ಲಿ ನಡೆಸಿದ ತಪಾಸಣೆ ಯಲ್ಲಿ ತ್ಯಾಜ್ಯಗಳನ್ನು ಉರಿಸಿದ ಬಗ್ಗೆ ಪತ್ತೆಹಚ್ಚಲಾಗಿ ದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳಲು ಕಾನೂನು ಪರವಾದ ಅನುಮತಿ ಇಲ್ಲದ ಕಾರಣ ಸಂಬಂಧ ಪಟ್ಟವರಿಗೆ ವರದಿ ನೀಡಿ ಮುನ್ನೆಚ್ಚರಿಕೆ ನೀಡಲಾ ಯಿತು. ಮುಳ್ಳೇರಿಯ ಪೇಟೆಯಲ್ಲಿ ರಾತ್ರಿ ವೇಳೆಗಳಲ್ಲಿ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ಉರಿಸಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸ್ಪೆಷಲ್ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆ ಯಲ್ಲಿ ಮಾರ್ಜಿನ್ ಫ್ರೀ ಕನ್‌ಸ್ಯೂಮರ್ ಬಜಾರ್, ಸೂಪರ್ ಮಾರ್ಕೆಟ್, ಶಾಪಿಂಗ್ ಕಾಂಪ್ಲೆಕ್ಸ್ ಎಂಬೀ ಸಂಸ್ಥೆಗಳಿಗೆ ಸಂಬಂಧಿಸಿ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಿದ್ದು, ದಂಡ ವಿಧಿಸಲಾಗಿದೆ.
ಪಳ್ಳಿಕ್ಕೆರೆ ಪಂಚಾಯತ್‌ನ ಬೇಕಲ್ ಜಂಕ್ಷನ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಮಲಿನ ಜಲ ಬಹಿರಂಗವಾಗಿ ಹರಿಯಬಿಟ್ಟಿರುವುದಕ್ಕಾಗಿ ಟವರ್ ಮಾಲಕನಿಂದ 5೦೦೦ ರೂ. ದಂಡ ವಸೂಲು ಮಾಡಲಾಗಿದೆ. ರೆಸ್ಟೋರೆಂಟ್, ಸೂಪರ್‌ಮಾರ್ಕೆಟ್ ಮೊದಲಾದ ಸಂಸ್ಥೆಗಳಿಂದ 5೦೦೦ ರೂ. ದಂಡ ವಸೂಲು ಮಾಡಲಾಗಿದೆ. ಪುಲ್ಲೂರು ಪೆರಿಯ ಪಂಚಾಯತ್‌ನಲ್ಲೂ ರಸ್ತೆಗೆ ಮಲಿನಜಲ ಹರಿಯಬಿಟ್ಟ ಹಿನ್ನೆಲೆಯಲ್ಲಿ 5೦೦೦ ರೂ. ದಂಡ ವಸೂಲು ಮಾಡಲಾಗಿದೆ. ತಂಡದಲ್ಲಿ ಸ್ಪೆಷಲ್ ಎನ್‌ಫೋರ್ಸ್‌ಮೆಂಟ ಸ್ಕ್ವಾಡ್ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಬಿ.ಕೆ. ದೀಪ, ಪಿ.ವಿ. ಸೌಮ್ಯ, ಹೆಡ್ ಕ್ಲರ್ಕ್ ಐ. ಬಿನು, ಇ.ಕೆ. ಫಾಸಿಲ್ ಭಾಗವಹಿಸಿದರು.
ಸಿದ್ಧಾರ್ಥ್ ಸಾವು: ಉಪಕುಲಪತಿಗೆ ರಾಜ್ಯಪಾಲರಿಂದ ನೋಟೀಸು
ತಿರುವನಂತಪುರ: ಪೂಕೋಡ್ ವೆಟರ್ನರಿ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್‌ನ ಸಾವಿಗೆ ಸಂಬಂಧಿಸಿ ಕುಲಪತಿ ಯಾಗಿರುವ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಠಿಣ ಕ್ರಮಗಳನ್ನು ಆರಂಭಿಸಿದ್ದಾರೆ. ಮಾಜಿ ಉಪಕುಲಪತಿ ಎಂ.ಆರ್. ಶಶೀಂದ್ರ ನಾಥ್‌ಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿ ನೋಟೀಸು ನೀಡಲಾಗಿದೆ. ಮಾಜಿ ಡೀನ್, ಅಸಿಸ್ಟೆಂಟ್ ವಾರ್ಡನ್ ಎಂಬಿವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ೪೫ ದಿನಗಳೊಳಗೆ ತಿಳಿಸಬೇಕೆಂದು ಉಪಕುಲಪತಿಗೆ ನಿರ್ದೇಶ ನೀಡಲಾಗಿದೆ.