ಮುಂದುವರಿಯುತ್ತಿರುವ ಕೆಂಪುಕಲ್ಲುಕ್ವಾರೆ ಮಾಲಕರ ನಿರಶನ: ನಾಳೆ ಚರ್ಚೆ
ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೆಂಪುಕಲ್ಲು ಕ್ವಾರೆ ಮಾಲಕರು ವಿದ್ಯಾನಗರ ಬಳಿ ಆರಂಭಿಸಿರುವ ಅನಿರ್ಧಿಷ್ಟಾವಧಿ ನಿರಶನ ಇನ್ನೂ ಮುಂದುವರಿಯುತ್ತಿ ರುವಂತೆಯೇ ಆ ಸಂಘಟನೆಯ ಜಿಲ್ಲಾ ನೇತಾರರನ್ನು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಚರ್ಚೆಗೆ ಕರೆದಿದ್ದಾರೆ.ಇದರಂತೆ ನಾಳೆ ಬೆಳಿಗ್ಗೆ ೯.೩೦ಕ್ಕೆ ಕಲೆಕ್ಟರೇಟ್ ಚೇಂಬರ್ನಲ್ಲಿ ಚರ್ಚೆ ನಡೆಯಲಿದೆ. ಕೆಂಪುಕಲ್ಲು ಕ್ವಾರೆ ಮಾಲಕ ಸಂಘಟನೆಯ ಅಧ್ಯಕ್ಷ ಸುಧಾಕರ ಪೂಜಾರಿ, ಕಾರ್ಯದರ್ಶಿಹುಸೈನ್ ಬೇರ್ಕ, ಕೋಶಾಧಿಕಾರಿ ಎಂ. ವಿನೋದ್ ಕುಮಾರ್ ಎಂಬವರನ್ನು ಚರ್ಚೆಗೆ ಆಹ್ವಾನಿಸಲಾಗಿದೆ. ಶಾಸಕರಾದ ಎನ್.ಎ. ನೆಲ್ಲಿಕುನ್ನು ಮತ್ತು ಸಿ.ಎಚ್. ಕುಂಞಂಬು ಭಾಗವಹಿಸುವರು. ಚರ್ಚೆಯಲ್ಲಿ ಸಂಘಟನೆಯ ಇನ್ನಷ್ಟು ಪ್ರತಿನಿಧಿಗಳು ಪಾಲ್ಗೊಳ್ಳಿಸಬೇಕೆಂಬ ಬೇಡಿಕೆಯನ್ನು ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ಮುಂದಿರಿಸಿದ್ದಾರೆ