ರಾಗಂ ಜಂಕ್ಷನ್, ಪೆರುವಾಡ್‌ನಲ್ಲಿ ಕಾಲ್ನಡೆ ಮೇಲ್ಸೆತುವೆ ನಿರ್ಮಾಣ ಪರಿಗಣನೆಯಲ್ಲಿ-ಸಚಿವ
ಉಪ್ಪಳ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲೂ, ಪೆರುವಾಡ್‌ನಲ್ಲೂ ಫೂಟ್ ಓವರ್‌ಬ್ರಿಡ್ಜ್ ನಿರ್ಮಿಸುವುದು ಪರಿಗಣನೆಯಲ್ಲಿದೆ ಯೆಂದು ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಶಾಸಕ ಎ.ಕೆ.ಎಂ. ಅಶ್ರಫ್‌ರ ಸಬ್‌ಮಿಶನ್‌ಗೆ ಉತ್ತರವಾಗಿ ಸಚಿವರು ಈ ವಿಷಯ ತಿಳಿಸಿದ್ದಾರೆ. ರಾಗಂ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಮಂಜೂರು ಮಾಡಲು ಉಪ್ಪಳದಲ್ಲಿ ಮೇಲ್ಸುತುವೆಯ ಉದ್ದ ಹೆಚ್ಚಿಸಲು ತಾಂತ್ರಿಕ ಸಮಸ್ಯೆ ಇದೆಯೆಂದು ಸಚಿವರು ನುಡಿದರು. ಉಪ್ಪಳದ ಮೇಲ್ಸುತುವೆಯ ಉದ್ದ ಹೆಚ್ಚಿಸಲು, ಕಾಲ್ನಡೆ ಪ್ರಯಾಣಿಕರ ಸುರಕ್ಷಿತತೆಗೆ ಸರ್ವೀಸ್ ರಸ್ತೆಗೆ ಹೊಂದಿಕೊಂಡು ಬಸ್‌ವೇ ಸೌಕರ್ಯ ಸಿದ್ಧಪಡಿಸಬೇಕೆಂದು ಶಾಸಕರು ಸಬ್‌ಮಿಶನ್ ಮೂಲಕ ಆಗ್ರಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿ-ಚೆಂಗಳ ರಿಚ್‌ನ ಕಾಮಗಾರಿ ಶರವೇಗದಲ್ಲಿ ಮುಂದುವರಿಯುತ್ತಿರುವ ಮಧ್ಯೆ ಸ್ಥಳೀಯರು ಹಾಗೂ ಸಾರ್ವ ಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಉಂಟಾಗಬೇಕೆಂದು ಶಾಸಕರು ವಿಧಾನ ಸಭೆಯಲ್ಲಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಅತ್ಯಂತ ಕ್ಷಿಪ್ರವಾಗಿ ಕಾಮಗಾರಿ ನಡೆ ಯುತ್ತಿರುವ ರೀಚ್‌ಗಳಲ್ಲಿ ಒಂದಾಗಿದೆ ತಲಪ್ಪಾಡಿ-ಚೆಂಗಳ ರೀಚ್. ಆದರೆ ೭೫ ಶೇ. ಕೆಲಸ ಪೂರ್ತಿಗೊಂಡಾಗ ಜನರ ಆತಂಕವೂ ಹೆಚ್ಚಿದೆಯೆಂದು ಶಾಸಕರು ವಿಧಾನಸಭೆಯಲ್ಲಿ ತಿಳಿಸಿದರು.