ಸಮುದ್ರದಲ್ಲಿ ನಾಪತ್ತೆಯಾದ ಬೆಸ್ತನ ಮೃತದೇಹ ಪತ್ತೆ
ಕಾಸರಗೋಡು: ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತನ ಮೃತದೇಹ ಪತ್ತೆಯಾಗಿದೆ. ಪಶ್ಚಿಮ ಬಂಗಾಳ ನಿವಾಸಿ ಜಯದೇವ್‌ಗಿರಿ (೫೪) ಸಾವನ್ನಪ್ಪಿದ ಬೆಸ್ತ. ಹೊಸದುರ್ಗ ಚಿತ್ತಾರಿ ಸಮುದ್ರ ಕಿನಾರೆಯಿಂದ ಮೂರು ನೋಟಿಕ್ಕಲ್ ಮೈಲಿನ ಸಮುದ್ರದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮೀನುಗಾರಿಕೆ ವೇಳೆ ಜಯದೇವ್‌ಗಿರಿ ನಿನ್ನೆ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ಆ ಕೂಡಲೇ ಚೆರ್ವತ್ತೂರು ಮಡಕರೆಯ ಬೋಟ್ ಕಾರ್ಮಿಕರು ಮತ್ತು ಮೀನುಗಾರಿಕಾ ಇಲಾಖೆಯ ಸಿಬ್ಬಂದಿಗಳು ತಮ್ಮ ರೆಸ್ಕ್ಯೂ ಬೋಟ್‌ನಲ್ಲಿ ಸಮುದ್ರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ ಜಯದೇವ್ ಗಿರಿಯ ಮೃತದೇಹ ಪತ್ತೆಹಚ್ಚಲಾಗಿದ.