ಸಹಕಾರ ಭಾರತಿ ಜಿಲ್ಲಾ ಸಮಿತಿ ಸಭೆ: ಕೇಂದ್ರ ಸರಕಾರದ ಯೋಜನೆ ರಾಜ್ಯದಲ್ಲಿ ಜ್ಯಾರಿಗೊಳಿಸಲು ಆಗ್ರಹ

ಕಾಸರಗೋಡು: ಸಹಕಾರಿ ಇಲಾಖೆ ಯಲ್ಲಿ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಯೋಜನೆಗಳನ್ನು ಕೇರಳ ರಾಜ್ಯದ ಸಹಕಾರಿ ಸಂಘಗಳಲ್ಲಿ ಅನುಷ್ಠಾನಗೊಳಿ ಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರನ್ ಆಗ್ರಹಿಸಿದರು. ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಹಕಾರ ಭಾರತಿ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಅರವಿಂದಾಕ್ಷನ್, ಕಾರ್ಯದರ್ಶಿ ಗಣೇಶ ಪಾರೆಕಟ್ಟೆ, ಐತ್ತಪ್ಪ ಮವ್ವಾರ್ ಮಾತನಾಡಿದರು. ನವೆಂಬರ್ ೧೬ರಂದು ಕಾಸರಗೋಡಿನಲ್ಲಿ ಸಹಕಾರ ಸಪ್ತಾಹ ಆಚರಿಸಲು ತೀರ್ಮಾನಿಸಲಾಯಿತು.

ನೂತನ ಸಮಿತಿ ರೂಪೀಕರಿಸ ಲಾಯಿತು. ಅಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷರಾಗಿ ಪ್ರೇಮ್ ಕುಮಾರ್ ಅಗಲ್ಪಾಡಿ, ಜಯರಾಜ್ ಬೆಳ್ಳೂರು, ಪ್ರಧಾನ ಕಾರ್ಯದರ್ಶಿ ಯಾಗಿ ರಾಧಾಕೃಷ್ಣನ್ ಕರಿಂಬಿಲ್, ಜೊತೆ ಕಾರ್ಯದರ್ಶಿಗಳಾಗಿ ವೇಣು ಗೋಪಾಲ್, ಶ್ರೀಲತಾ ಕಳನಾಡು, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ್ ಬಾಡೂರು, ಕೋಶಾ ಧಿಕಾರಿಯಾಗಿ ಚಂದ್ರಹಾಸ ಆಯ್ಕೆಯಾದರು. ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್ ಸ್ವಾಗತಿಸಿ, ಸಂಘಟನಾ ಪ್ರಮುಖ್ ಅಶೋಕ್ ಬಾಡೂರು ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page