1.195 ಕಿಲೋ ಗಾಂಜಾ ಪತ್ತೆ: ಓರ್ವ ಸೆರೆ
ಮಂಜೇಶ್ವರ: ಮಂಜೇಶ್ವರದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.195 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಕುಬಣೂರು ಕನ್ನಾಟಿಪಾರೆಯ ಅಬ್ದುಲ್ಲ ಕೆ. (46) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕನ್ನಾಟಿಪಾರೆಯಲ್ಲಿ ಕುಂಬಳೆ ರೇಂಜ್ನ ಎಕ್ಸೈಸ್ ಇನ್ಸ್ಪೆಕ್ಟರ್ ಮ್ಯಾಥ್ಯು ಕೆ.ಡಿ. ನೇತೃತ್ವದ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಖಿಲೇಶ್ ಎಂ.ಎA, ಬಿಜಿಲ ವಿ. ಮತ್ತು ಚಾಲಕ ಪ್ರವೀಣ್ ಕುಮಾರ್ ಎಂಬಿವರು ಒಳಗೊಂಡಿದ್ದರು.