16ರ ಬಾಲಕಿಯನ್ನು ಮದುವೆ ಮಾಡಿಕೊಡುವಂತೆ ಬೆದರಿಕೆ: ಆರೋಪಿಗೆ ರಿಮಾಂಡ್
ಉಪ್ಪಳ: ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ಮದುವೆ ಮಾಡಿಕೊಡಬೇಕೆಂದು ಒತ್ತಾಯಿಸಿ ಆಕೆಯ ಹೆತ್ತವರಿಗೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ಕರ್ನಾಟಕದ ಬಂಟ್ವಾಳ ನಿವಾಸಿ ವಿಕ್ರಮ (22) ಎಂಬಾತ ರಿಮಾಂಡ್ ಗೊಳಗಾದ ಆರೋಪಿಯಾಗಿದ್ದಾನೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 16ರ ಹರೆಯದ ಬಾಲಕಿಯನ್ನು ವಿಕ್ರಮ ಪ್ರೀತಿಸಿದ್ದನೆನ್ನಲಾಗಿದೆ. ಇತ್ತೀಚೆಗೆ ಬಾಲಕಿಯ ಮನೆಗೆ ತಲುಪಿದ ವಿಕ್ರಮ ಬಾಲಕಿಯನ್ನು ಮದುವೆ ಮಾಡಿಕೊ ಡುವಂತೆ ಆಕೆಯ ಹೆತ್ತವರನ್ನು ಒತ್ತಾಯಿಸಿದ್ದನು. ಆದರೆ ಬಾಲಕಿಗೆ ಪ್ರಾಯಪೂರ್ತಿ ಯಾಗಿಲ್ಲವೆಂದೂ ಆದ್ದರಿಂದ ಮದುವೆ ಸಾಧ್ಯವಿಲ್ಲ ವೆಂದು ಹೆತ್ತವರು ತಿಳಿಸಿದಾಗ ಅವರಿಗೆ ವಿಕ್ರಮ ಬೆದರಿಕೆಯೊಡ್ಡಿದ್ದನೆನ್ನಲಾಗಿದೆ. ಈ ಬಗ್ಗೆ ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಆರೋಪಿಯನ್ನು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.