ದೇಶವನ್ನು ಬೆಚ್ಚಿ ಬೀಳಿಸಿದ ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ

ಕಾಸರಗೋಡು: ದೇಶದ ಜನತೆಯನ್ನು ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 16 ವರ್ಷಗಳಾ ಯಿತು. 2010 ಮೇ ೨೨ರಂದು ಬೆಳಿಗ್ಗೆ 6.30 ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಆರು ಮಂದಿ ನೌಕರರು ಸಹಿತ 158 ಮಂದಿ  ಮೃತಪಟ್ಟಿದ್ದರು. ಈ ಪೈಕಿ ೫೨ ಮಂದಿ ಕೇರಳೀಯರಾ ಗಿದ್ದಾರೆ. ಇವರಲ್ಲೂ ಬಹುಪಾಲು ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. 

ದುಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 152 ಮಂದಿ ಪ್ರಯಾಣಿಕರ ಸಹಿತ  ಸಂಚರಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ರನ್‌ವೇಯ ನಿರ್ಧಿಷ್ಟ  ಸ್ಥಾನದಿಂದ 600 ಮೀಟರ್ ಮುಂದಕ್ಕೆ ಸಂಚರಿಸಿ ವಿಮಾನ ಲ್ಯಾಂಡಿಂಗ್ ನಡೆಸಿದೆ.  ಅಲ್ಲಿಂದ  ವಿಮಾನ ಮುಂದಕ್ಕೆ ಸಾಗಿ ರನ್‌ವೇಯಿಂದ ನಿಯಂತ್ರಣ ತಪ್ಪಿ  ಹೊಯ್ಗೆ ದಿಬ್ಬದ ಮೇಲೆ ಬಡಿದಿದೆ. ಅನಂತರ  ಅಲ್ಲಿಂದಲೂ ಮುಂದಕ್ಕೆ ಸಾಗಿದ ವಿಮಾನದ ರೆಕ್ಕೆ ಕಾಂಕ್ರೀಟ್ ಟವರ್‌ಗೆ ಬಡಿದು ಪತನಗೊಂಡಿದೆ. ತಕ್ಷಣ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ.

ಈ ವಿಮಾನ ದುರಂತ ಇಡೀ ಕಾಸರಗೋಡು ಜಿಲ್ಲೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಇದೇ ವೇಳೆ ಮೃತಪಟ್ಟವರ ಆಶ್ರಿತರಿಗೆ  ಲಭಿಸಬೇಕಾದ ಅಂತಾರಾಷ್ಟ್ರೀಯ ಒಪ್ಪಂದ ಪ್ರಕಾರದ ನಷ್ಟ ಪರಿಹಾರ ಇನ್ನೂ ಹಲವರಿಗೆ ಲಭಿಸಿಲ್ಲ. ನಷ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ  ಮುಂದುವರಿಯುತ್ತಿದೆ.

RELATED NEWS

You cannot copy contents of this page