20ರ ಹರೆಯದ ಯುವತಿ ಅನ್ಯಕೋಮಿನ, ಕಾಪಾ ಪ್ರಕರಣದ ಆರೋಪಿಯೊಂದಿಗೆ ಪರಾರಿ
ಕಾಸರಗೋಡು: 20ರ ಹರೆಯದ ಯುವತಿ ಅನ್ಯ ಕೋಮಿನ, ಕಾಪಾ ಪ್ರಕರಣದಲ್ಲಿ ಆರೋಪಿಯಾದ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಕುಟುಂಬದ ಸದಸ್ಯೆಯಾದ ಯುವತಿ ಪರಾರಿಯಾಗಿರುವುದಾಗಿ ದೂರಲಾಗಿದೆ. ಇತ್ತೀಚೆಗೆ ಯುವತಿ ಹಾಗೂ ಕುಟುಂಬ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸ ಆರಂಭಿಸಿತ್ತು.
ಈ ಮಧ್ಯೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆನ್ನಲಾಗಿದೆ. ಈ ವಿಷಯ ತಿಳಿದು ಮನೆಯವರು ಯುವತಿಗೆ ತಾಕೀತು ನೀಡಿರುವುದಾಗಿ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಆಕೆ ಪರಾರಿಯಾಗಿರುವುದಾಗಿ ಸೂಚನೆ ಲಭಿಸಿದೆ. ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಬದಿಯಡ್ಕ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ನೇಹಾ ಎಂಬ ಯುವತಿ ಮಿರ್ಶಾದ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಳು. ಈ ಇಬ್ಬರು ಸ್ಪೆಶಲ್ ಮ್ಯಾರೇಜ್ ಆಕ್ಟ್ ಪ್ರಕಾರ ಮದುವೆಯಾಗಿದ್ದರೂ ಅದು ನಾಟಕೀಯ ವಿದ್ಯಾಮಾನಗಳಿಗೆ ಎಡೆಯಾಗಿತ್ತು. ಪೊಲೀಸ್ ಅಧಿಕಾರಿಗಳ ಒತ್ತಾಸೆಯೊಂದಿಗೆ ನೇಹಾಳನ್ನು ಮಿರ್ಶಾದ್ ಬಲೆಗೆ ಹಾಕಿಕೊಂಡಿದ್ದಾನೆಂದು ಆರೋಪಿಸಿ ವಿ.ಹಿಂ.ಪ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಲಾಗಿತ್ತು.