ಸೂರ್ಯಾಘಾತವೆಂಬ ಶಂಕೆ: ಕಾರಡ್ಕದಲ್ಲಿ ಗೇರುಬೀಜ ಸಂಗ್ರಹಿಸಲು ತೆರಳಿದ್ದ ವೃದ್ಧ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಗೇರುಬೀಜ ಹೆಕ್ಕಲೆಂದು ಹೋಗಿದ್ದ ವೃದ್ಧ ಗೇರು ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಣ್ಣೂರು ಉದಯಗಿರಿ ಆಲಕ್ಕೋಡ್ ನಿವಾಸಿ, ಕಾರಡ್ಕ ಪಂಚಾಯತ್‌ನ ನೆಚ್ಚಿಪಡ್ಪು ನೀರೋಳಿಪಾರದಲ್ಲಿ ವಾಸವಾಗಿ ರುವ ಎ.ಡಿ. ದೇವಸ್ಯ (೭೨) ನಿಧನಹೊಂದಿದವರು. ನಿನ್ನೆ ಸಂಜೆ ೩ ಗಂಟೆಗೆ ದೇವಸ್ಯ ಗೇರುಬೀಜ ಹೆಕ್ಕಲು ಹೋಗಿದ್ದರೆನ್ನಲಾಗಿದೆ. ಸಂಜೆ ವೇಳೆಗೆ ಆ ದಾರಿಯಲ್ಲಿ ಹೋದವರು ದೇವಸ್ಯರನ್ನು ಅಸ್ವಸ್ಥ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಘಟನೆಯಲ್ಲಿ ಆದೂರು ಪೊಲೀಸರು ಅಸಹಜ ಸಾವಿಗೆ …