ಕುಟುಕುಟು ಜುಗಾರಿ: ಐದು ಮಂದಿ ಬಂಧನ

ಕಾಸರಗೋಡು: ಕುತ್ತಿಕ್ಕೋಲು ಶ್ರೀ ತಂಬುರಾಟಿ ಕ್ಷೇತ್ರ ಸಮೀಪದ  ಗುಡ್ಡೆ ಪ್ರದೇಶದಲ್ಲಿ ನಡೆಯುತ್ತಿದ್ದ ಕುಟುಕುಟು ಜುಗಾರಿ ಕೇಂದ್ರಕ್ಕೆ ಬೇಡಗಂ ಪೊಲೀಸರು ದಾಳಿ ನಡೆಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಅಡೂರು ಪಳ್ಳಂಜಿ ಪುದಿಯಕಂಡಂ ಹೌಸ್ ನಿವಾಸಿ  ಗಂಗಾಧರನ್(41), ಬಂದಡ್ಕ ಕುನ್ನುಮ್ಮಲ್ ನಿವಾಸಿ ಅಬೂಬಕ್ಕರ್ (24) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ 3880 ರೂಪಾಯಿ ಗಳನ್ನು ವಶಪಡಿಸಲಾಗಿದೆ. ಇಂದು ಮುಂಜಾನೆ 1.30ರ ವೇಳೆ   ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಮೊನ್ನೆ ರಾತ್ರಿಯೂ ಇದೇ ಸ್ಥಳದಲ್ಲಿ ಕುಟುಕುಟು ಜುಗಾರಿ ದಂಧೆ ನಡೆಯುತ್ತಿದ್ದ …

ಹಿರಿಯ ಟೈಲರ್ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ ನಿಧನ

ಕುಂಬಳೆ: ಕುಂಬಳೆಯ ಹಿರಿಯ ಟೈಲರ್  ಮೀಂಜ ಕುಳೂರು ಕರಿಪ್ಪಾರ ನಿವಾಸಿ ಬಾಲಕೃಷ್ಣ ಶೆಟ್ಟಿ  (62) ನಿಧನಹೊಂದಿದರು. ಇವರು ಕುಂಬಳೆಯ ಮೋಹನ್ ಟೈಲರ್ಸ್ ಎಂಬ ಟೈಲರಿಂಗ್ ಸಂಸ್ಥೆಯಲ್ಲಿ ಕಟ್ಟಿಂಗ್ ಮಾಸ್ತರ್ ಆಗಿದ್ದರು. ಕಿಡ್ನಿ ಸಂಬಂಧ ಸೌಖ್ಯ ಬಾಧಿಸಿದ್ದ ಇವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು.  ನಿನ್ನೆ ಸಂಜೆ ಹೃದಯಾ ಘಾತದಿಂದ ನಿಧನ ಸಂಭವಿಸಿದೆ. ಕೇರಳ ಸ್ಟೇಟ್ ಟೈಲರ್ಸ್  ಅಸೋಸಿಯೇಶನ್‌ನ ಮಾಜಿ ರಾಜ್ಯ ಸಮಿತಿ ಸದಸ್ಯರಾಗಿದ್ದ ಬಾಲಕೃಷ್ಣ ಶೆಟ್ಟಿಯವರು ಪ್ರಸ್ತುತ ಜಿಲ್ಲಾ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ …

ಜಿಲ್ಲೆಗೆ ಮಾದಕವಸ್ತು ಸಾಗಾಟ ಪತ್ತೆ: 50 ಗ್ರಾಂ ಎಂಡಿಎಂಎ ವಶ: ಕಾಸರಗೋಡು ನಿವಾಸಿ ಸಹಿತ 3 ಮಂದಿ ಬಂಧನ

ಮಂಜೇಶ್ವರ: ಭಾರೀ ಮಾದಕವಸ್ತುವಾದ ಎಂಡಿಎಂಎ ಸಹಿತ ಮೂರು ಮಂದಿ ಮಂಜೇಶ್ವರದಲ್ಲಿ ಸೆರೆಗೀಡಾಗಿದ್ದಾರೆ. ಕಾಸರಗೋಡು ಆಲಂಪಾಡಿ ಟಿಪ್ಪುನಗರದ ಮುಹಮ್ಮದ್ ಸಹಲ್ ಸಿ.ಎ, ಎರ್ನಾಕುಳಂ ನೋರ್ತ್ ಪರವೂರ್ ಪೊನ್ನಾನಿಯಿಲ್ ಹೌಸ್‌ನ ಅರುಣ್ ಕುಮಾರ್, ಕಲ್ಲಿಕೋಟೆ ವಡಗರ ಪುತ್ತೂರು ಮಯೂರ ಹೌಸ್‌ನ ಅನುಷ್ ಎಂ.ಪಿ. ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ ಸುಮಾರು 50 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಸ್ಪೆಶಲ್ ಸ್ಕ್ವಾಡ್ ನಿನ್ನೆ ರಾತ್ರಿ 7.30ರ ವೇಳೆ ಮಂಜೇಶ್ವರ ಪಾವೂರು ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ …

ಜೊತೆಗೆ ವಾಸಿಸುತ್ತಿದ್ದ ಗೆಳೆಯ ನಾಪತ್ತೆ: ಯುವತಿಯಿಂದ ದೂರು

ಕಾಸರಗೋಡು: ಕ್ವಾರ್ಟರ್ಸ್ ನಲ್ಲಿ ಜೊತೆಗೆ ವಾಸಿಸುತ್ತಿದ್ದ ಗೆಳೆಯ  ನಾಪತ್ತೆಯಾಗಿರುವುದಾಗಿ ತಿಳಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕರ್ನಾಟಕದ ಗದಗ ಲಕ್ಷ್ಮೀಶ್ವರ್ ಅಂಬೇಡ್ಕರ್ ನಗರದ  ಗಿರಿಜಾ  (28) ದೂರು ನೀಡಿದ್ದು, ಗೆಳೆಯನಾದ ಯೆಲ್ಲಪ್ಪ ಎಸ್ ಮೊಗೇರಿ (37) ನಾಪತ್ತೆಯಾಗಿರು ವುದಾಗಿ ತಿಳಿಸಲಾಗಿದೆ. ಚೌಕಿ ಕುನ್ನಿಲ್ ಕೆ.ಎಂ. ಕ್ವಾರ್ಟರ್ಸ್‌ನಲ್ಲಿ ಈ ಇಬ್ಬರು ವಾಸಿಸುತ್ತಿದ್ದರು. ಈ ತಿಂಗಳ ೧೮ರಂದು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ತೆರಳಿದ ಎಲ್ಲಪ್ಪ ಎಸ್ ಮೊಗೇರಿ ಅನಂತರ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು …

ಆರ್‌ಎಂಪಿ ಕಾರ್ಯಕರ್ತನ ಮನೆಯ ಬಾವಿಯಲ್ಲಿ ಮಲ

ಕಲ್ಲಿಕೋಟೆ: ಆರ್‌ಎಂಪಿ ಕಾರ್ಯಕರ್ತನ ಮನೆಯ ಬಾವಿಗೆ ಮಲ ಎಸೆದಿರುವುದಾಗಿ ದೂರಲಾಗಿದೆ. ನಾದಾಪುರ ತುಣೇರಿ ಎಂಬಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬೆಳಿಗ್ಗೆ ನೀರು ಮೇಲೆತ್ತಿದಾಗ  ಮಲ ಬೆರೆತಿರುವುದು ಗಮನಕ್ಕೆ ಬಂದಿದೆಯೆಂದು ಮನೆಯವರು ತಿಳಿಸಿದ್ದಾರೆ. ಆರ್‌ಎಂಪಿ ಕಾರ್ಯ ಕರ್ತ ತುಣೇರಿ ಚೆಕ್ಕಾಯಿಪೀಡಿಗ ಎಂಬಲ್ಲಿಗೆ ಸಮೀಪ  ತುಂಬೋಲಿಪೊ ಯಿಲ್ ಮನೋಜನ್ ಎಂಬವರ ಮನೆಯ ಬಾವಿಗೆ ಮಲ ಎಸೆಯಲಾ ಗಿದೆ. ಮನೋಜನ್ ಹಾಗೂ ಸಹೋದರ ಈ ಬಾವಿಯಿಂದ ನೀರು ಉಪಯೋಗಿಸುತ್ತಿದ್ದಾರೆ. ಆರ್‌ಎಂಪಿ ರೂಪೀಕರಣಗೊಂಡ ಬಳಿಕ ಮನೋಜನ್ ಈ ಪಕ್ಷದ ಸಕ್ರಿಯ …

ತೃಶೂರು ಪಟಾಕಿ ದುರಂತ: ಇನ್ನೋರ್ವ ಸಾವು; ಮಡಿದವರ ಸಂಖ್ಯೆ 17ಕ್ಕೇರಿಕೆ

ತೃಶೂರು: ತೃಶೂರು ಪೂರಂಗಾಗಿ ಸುಡುಮದ್ದು ತಯಾರಿಸುತ್ತಿದ್ದ ಮುಂಡತ್ತಿಕ್ಕಾಡ್‌ನಲ್ಲಿ  ಉಂಟಾದ ಭಾರೀ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಇನ್ನೋರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಮುಂಡತ್ತಿಕ್ಕಾಡಿನ ರಾಜೇಶ್ (38)   ಬೆಳಿಗ್ಗೆ ಸಾವನ್ನಪ್ಪಿದ ವ್ಯಕ್ತಿ. ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದ ಅವರನ್ನು ತೃಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅಸುನೀಗಿದ್ದಾರೆ. ಇದೇ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಮುಂಡತ್ತಿಕ್ಕಾಡಿನ ಉಣ್ಣಿಕೃಷ್ಣನ್ (58) ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿ ದ್ದರು. …

ಬೇಸಿಗೆ ಧಗೆಗೆ ತಂಪೆರೆಯಲು ಬರಲಿದೆ ಬೇಸಿಗೆ ಮಳೆ: ಎ. 29ರಂದು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್

ಕಾಸರಗೋಡು: ರಾಜ್ಯದಲ್ಲಿ ಬೇಸಿಗೆ ಧಗೆ ಹೆಚ್ಚಾಗುತ್ತಿರುವ ಜತೆಗೆ ರಾಜ್ಯದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಸಾಮಾನ್ಯವಾದ ರೀತಿಯಲ್ಲಿ ಬೇಸಿಗೆ ಮಳೆ ಸುರಿಯಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಕೇರಳದ ಕೆಲವೆಡೆ ಗಳಲ್ಲಿ ಇಂದು ಬೆಳಿಗ್ಗೆ ಬೇಸಿಗೆ ಮಳೆ ಸುರಿದಿದೆ. ಕಾಸರಗೋಡು ಸೇರಿದಂತೆ   ಇತರ ಜಿಲ್ಲೆಗಳಲ್ಲಿ  ಮುಂದಿನ ಎರಡು ದಿನಗಳಲ್ಲಿ ಬೇಸಿಗೆ ಮಳೆ ಸುರಿಯುವ ಸಾಧ್ಯತೆ ಇದೆ.  ಎಪ್ರಿಲ್ 29ರಂದು ಕಾಸರಗೋಡು, ಕಣ್ಣೂರು, ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ತೀವ್ರ ಬೇಸಿಗೆ ಮಳೆ ಸುರಿಯುವ ಸಾಧ್ಯತೆಯಿದ್ದು, ಅದರಿಂದಾಗಿ …

13 ವರ್ಷದ ಬಾಲಕಿ 23 ವರ್ಷದೊಳಗಿನ ಮಹಿಳಾ ತಂಡದ ನಾಯಕಿ

ಕಾಸರಗೋಡು: ವಿದ್ಯಾನಗರ ಪನ್ನಿಪ್ಪಾರೆ ಎಂ.ಜಿ ಕಾಲನಿ ಬಳಿಯ ಬಾಲಕಿ ಹರಿಪ್ರಿಯಾ ಔಕ್ 15,18,19 ಬಾಲಕಿಯರ ಕ್ರಿಕೆಟ್ ತಂಡ ದಲ್ಲಿ ಆಡಿ ಈಗ 23 ವರ್ಷದ ಕೆಳಗಿನ ಮಹಿಳೆಯರ ಜಿಲ್ಲಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆ ಯಾಗಿದ್ದಾಳೆ. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಿಕೆ ಲಕ್ಷ್ಮಿ-ಮಹೇಶ್‌ರಾಜು ದಂಪತಿ ಪುತ್ರಿಯಾದ ಹರಿಪ್ರಿಯಾ ಈಗ 13ನೇ ಹರೆಯದ ಲ್ಲಿದ್ದು ವಿದ್ಯಾನಗರ ಕೇಂದ್ರೀಯ ವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ೮ನೇ ತರಗತಿಗೆ ಪಾದಾರ್ಪಣೆಗೈದಿದ್ದಾಳೆ. ಫಾಸ್ಟ್ ಬೌಲರ್, ಬಲಗೈ ಬ್ಯಾಟ್ಸ್‌ಮ್ಯಾನ್ ಆದ ಈಕೆ ಆಲ್‌ರೌಂಡರ್ ಆಗಿದ್ದಾಳೆ.  …

ಕಾಳ್ಯಂಗಾಡು ಬ್ರಹ್ಮಕಲಶೋತ್ಸವ: ಉಗ್ರಾಣ ಮುಹೂರ್ತ

ಕೂಡ್ಲು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯ ಕ್ರಮಗಳು ನಿನ್ನೆ ಆರಂಭಗೊAಡಿದೆ. ಈ ಸಂಬAಧ ನಡೆದ ಉಗ್ರಾಣ ಮುಹೂರ್ತವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ ಅರ್ಚಕ ಯೋಗೀಶ, ಕ್ಷೇತ್ರ ಮೊಕ್ತೇಸರ ಅಚ್ಚುತ್ತ ಕಾಳ್ಯಂಗಾಡು,  ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕಾರ್ಯದರ್ಶಿ ಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ರಘು ಮೀಪುಗುರಿ, ಮೋಹನ್ ರಾಜ್, ಪುಷ್ಪಾವತಿ ಮಹಾಲಿಂಗ ಉಪಸ್ಥಿತರಿದ್ದರು.

ಕುಂಬಳೆಯಲ್ಲಿ ಕೆ.ಜಿ. ಮಾರಾರ್ ಸಂಸ್ಮರಣೆ

ಕುಂಬಳೆ:  ಬಿಜೆಪಿ ಪಂಚಾ ಯತ್ ಸಮಿತಿ ವತಿಯಿಂದ ಬಿಜೆಪಿಯ ಹಿರಿಯ ನೇತಾರರಾಗಿದ್ದ ಕೆ.ಜಿ. ಮಾರಾರ್ ರವರ ೩೧ನೇ ಸಂಸ್ಮರಣೆ ಕುಂಬಳೆ ಪಕ್ಷದ ಕಚೇರಿಯಲ್ಲಿ ನಡೆಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಿಜೆಪಿ ಕುಂಬಳೆ ದಕ್ಷಿಣ ವಲಯ ಸಮಿತಿ ಅಧ್ಯಕ್ಷ ಕೆ. ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಮುಖಂಡರಾದ ಶಿವಪ್ರಸಾದ್ ರೈ, ಕೆ. ರಮೇಶ್ ಭಟ್, ಕೆ. ಸುಧಾಕರ ಕಾಮತ್, ಶಶಿ ಕುಂಬಳೆ ಐತಪ್ಪ ಎನ್, ವರುಣ ಕುಮಾರ್, ವಿನೋದನ್ ಕಡಪ್ಪುರ, …