ಸೀತಾಂಗೋಳಿಯಲ್ಲಿ ಯುವಕನ ಕೊಲೆ ಆರೋಪಿ ಗಂಟೆಗಳೊಳಗೆ ಬಂಧನ
ಕುಂಬಳೆ: ಸೀತಾಂಗೋಳಿಯಲ್ಲಿ ಹಾಡಹಗಲೇ ಯುವಕನನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ ಸಫಾಹಿದ್ ಯಾನೆ ಶಫಾಯತ್ (35) ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಕುಂಬಳೆ ನಾಯ್ಕಾಪು ಕೋಟೆಕಾರ್‌ನ ಶ್ರೀನಿವಾಸ (39) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಸಿ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೆರೆ ಹಿಡಿದಿದ್ದಾರೆ. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಸೀತಾಂಗೋಳಿಯ ಬಿವರೇಜಸ್ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಬದಿಯಲ್ಲಿ …