ವರ್ಕಾಡಿಯಲ್ಲಿ  ಜೆಎಲ್‌ಜಿ ಕಾವೇರಿ ಕಲ್ಲಂಗಡಿ ಕೊಯ್ಲು  ಉದ್ಘಾಟನೆ

ವರ್ಕಾಡಿ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ  ಕುಟುಂಬಶ್ರೀ ಜೆಎಲ್‌ಜಿ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಮಹಿಳಾ ಗುಂಪಾದ ಕಾವೇರಿ  ಜಾಯಿಂಟ್ ಲೈಬಿಲಿಟಿ ಗ್ರೂಪ್ ವತಿಯಿಂದ ಬೆಳೆದ ಕಲ್ಲಂಗಡಿ ಬೆಳೆ ಕೊಯ್ಲು ನಡೆಯಿತು. ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜೀಸುವ ಉದ್ದೇಶ ಇದರ ಹಿಂದಿದೆ. ಸಿಡಿಎಸ್ ಅಧ್ಯಕ್ಷೆ  ವಿಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಕುಟುಂಬಶ್ರೀ ಜಿಲ್ಲಾ  ಮಿಶನ್ ಕೋ-ಆರ್ಡಿನೇಟರ್ ರತೀಶ್ ಕೊಯ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಅಸಿಸ್ಟೆಂಟ್ ಸೆಕ್ರೆಟರಿ ಐತಪ್ಪ ನಾಯ್ಕ್, ಅಕೌಂಟೆಂಟ್ ಉದಯಕುಮಾರ್, ಸಚಿನ್ ಮತ್ತು   ರೇಶ್ಮ, ಸಿಆರ್‌ಪಿ, ಎಎಚ್ ಸಿಆರ್‌ಪಿಗಳು, ಸಿಡಿಎಸ್ ಸದಸ್ಯರು ಹಾಗೂ ಜೆಎಲ್‌ಜಿ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಗುಂಪುಗಳ ಕೃಷಿ ಸಾಧನೆಗೆ  ಮೆಚ್ಚುಗೆ  ವ್ಯಕ್ತಪಡಿಸಿದರು. ಕಾರ್ಯಕ್ರಮದ ನಂತರ ಅಧಿಕಾರಿಗಳು ಮತ್ತು ಸದಸ್ಯರು ನಲ್ಲಂಗಿ ವಾರ್ಡ್‌ನಲ್ಲಿರುವ ಕಾವಿ ಜೆಎಲ್‌ಜಿ ವತಿಯಿಂದ ಬೆಳೆದ ಹಾಗಲಕಾಯಿ ಮತ್ತು ಹೀರೇಕಾಯಿ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂ ಡರು. ತಾಂತ್ರಿಕ ಮಾರ್ಗದರ್ಶನ ಮತ್ತು ಪ್ರೋತ್ಸಾಹ  ನೀಡಲಾಯಿತು.
 

You cannot copy contents of this page