ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಾದ ಕಾಸರಗೋಡು ಬೀಚ್ ರಸ್ತೆ ಬಿ.ಬಿ. ಆಳ್ವ ಕಂಪೌಂಡ್ ಕಾಮಧೇನು ಹೌಸ್ನ ಬೇಳ ರಾಧಾಕೃಷ್ಣ ಅಡಿಗ (80) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾಗಿ ದ್ದರು. ಕೊರೊನಾ ಬಳಿಕ ಅವರು ಹೆಚ್ಚಾಗಿ ಸಕ್ರಿಯರಾಗಿರಲಿಲ್ಲ. ಈ ಹಿಂದೆ ಗುಮಾಸ್ತರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ತಂದೆ ದಿ| ಶಂಕರನಾರಾಯಣ ಅಡಿಗರೂ ಈ ಹಿಂದೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಅರ್ಚಕರಾಗಿದ್ದರು.
ರಾಧಾಕೃಷ್ಣ ಅಡಿಗರು ಪತ್ನಿ ಶಾಂತಿ, ಮಕ್ಕಳಾದ ಶಂಕರನಾರಾ ಯಣ ಅಡಿಗ, ಪೂರ್ಣಿಮ, ಅಳಿಯ ಸೂರ್ಯನಾರಾಯಣ, ಸೊಸೆ ಸುಚಿತ್ರಾ ಅಡಿಗ, ಸಹೋದರ, ಅರ್ಚಕರೂ ಆಗಿರುವ ಬೇಳ ಸತ್ಯನಾರಾಯಣ ಅಡಿಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರ ಮಹಾಬಲ ಅಡಿಗ ಈ ಹಿಂದೆ ನಿಧನರಾಗಿದ್ದಾರೆ.






