ಕುಂಬಳೆ: ಕಾಂಗ್ರೆಸ್ ನೇತಾರನ ಸಹೋದರ ಮೈದಾನ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿಯವರ ಸಹೋದರ ಕೋಟೆಕಾರು ನಿವಾಸಿ ಸುನಿಲ್ ಕುಮಾರ್ (40) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರ ಮೃತದೇಹ ಕೋಟೆಕಾರು ಮೈದಾನ ಬಳಿ ಇಂದು ಬೆಳಿಗ್ಗೆ 7 ಗಂಟೆಗೆ ಪತ್ತೆಯಾಗಿದೆ. ವಿಷಯ ತಿಳಿದು ಸಂಬಂಧಿಕರು ಹಾಗೂ ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ಕಾರಣವೇನೆಂದು ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನಿಲ್ ಕುಮಾರ್‌ರ ತರವಾಡು ಕ್ಷೇತ್ರದಲ್ಲಿ ಇಂದು ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಇವರು ನಿನ್ನೆ ಸಂಜೆವರೆಗೆ ಅಲ್ಲಿ ಪೈಂಟಿಂಗ್ ಕೆಲಸದಲ್ಲಿ ನಿರತರಾಗಿ ದ್ದರು. ಅನಂತರ ಅಲ್ಲಿಂದ ತೆರಳಿದ ಸುನಿಲ್ ಕುಮಾರ್ ಮನೆಗೆ ತಲುಪಿರಲಿಲ್ಲವೆಂದು ಹೇಳಲಾಗು ತ್ತಿದೆ. ಇದರಿಂದ ತರವಾಡಿನಲ್ಲೇ ಅವರು ನಿಂತಿರಬಹುದೆಂದು ಮನೆಯವರು ಭಾವಿಸಿದ್ದರು.
ಈ ಮಧ್ಯೆ ಇಂದು ಬೆಳಿಗ್ಗೆ ಸುನಿಲ್ ಕುಮಾರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃಷ್ಣ ಪೂಜಾರಿ- ಕಮಲ ದಂಪತಿಯ ಪುತ್ರನಾದ ಮೃತರು ಪತ್ನಿ ಕವಿತ, ಸಹೋದರ ರವಿ ಪೂಜಾರಿ, ಸಹೋದರಿಯರಾದ ಇಂದಿರಾ, ಭಾರತಿ, ರೇಖಾ, ವಿಶಾಲಾಕ್ಷಿ, ಗಾಯತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






