ಸರಕಾರ ರಚನೆಗೆ ವಿ.ಡಿ. ಸತೀಶನ್‌ರಿಗೆ ರಾಜ್ಯಪಾಲ ಆಹ್ವಾನ:  ಪ್ರಮಾಣವಚನ ಸೋಮವಾರ

ತಿರುವನಂತಪುರ: ಚುನಾವಣಾ  ಫಲಿತಾಂಶ ಹೊರಬಂದ ದಿನದಿಂದ ಆರಂಭಗೊಂಡು ಸತತ ಹತ್ತು ದಿನಗಳ ತನಕ ದೀರ್ಘ ಚರ್ಚೆಯ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಲ್ಪಟ್ಟ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್   ಲೋಕಭವನ್‌ನಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ರನ್ನು ಸಂದರ್ಶಿಸಿ ಸರಕಾರ ರಚನೆಗಾಗಿರುವ ವಿದ್ಯುಕ್ತ ಹಕ್ಕು ಮಂಡನೆ ಸಲ್ಲಿಸಿದ್ದಾರೆ.  ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಸರಕಾರ ರಚನೆಗೆ ವಿ.ಡಿ. ಸತೀಶನ್‌ರಿಗೆ ಆಹ್ವಾನ ನೀಡಿದ್ದಾರೆ. ಇದರಂತೆ ಸೋಮವಾರ  ಬೆಳಿಗ್ಗೆ 10 ಗಂಟೆಗೆ ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ದೂರಿಯ ಸಮಾರಂಭದಲ್ಲಿ ವಿ.ಡಿ. ಸತೀಶನ್ …

ಒಂದೇ ಪ್ರದೇಶದಲ್ಲಿ ರಾತ್ರಿ ಮೂರು ಲಾರಿಗಳ ಬ್ಯಾಟರಿ ಕಳವು: ಸಮಗ್ರ ತನಿಖೆ ಆರಂಭ

ಕುಂಬಳೆ: ರಸ್ತೆ ಬಳಿ ನಿಲ್ಲಿಸಿದ್ದ ಮೂರು ಲಾರಿಗಳ ಬ್ಯಾಟರಿಗಳನ್ನು ಒಂದೇ ದಿನದಂದು ರಾತ್ರಿ ಕಳ್ಳರು ಕದ್ದು ಸಾಗಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.  ಈ ಬಗ್ಗೆ ಕರ್ನಾಟಕ ರಾಜ್ಯ ನೋಂದಾಯಿತ ಲಾರಿಯೊಂದರ ಮಾಲಕ ಕುಂಬಳೆ ಕೊಯಿಪ್ಪಾಡಿ ನಾರಾಯಣಮಂ ಗಲದ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಬಳಿಯ ಐಶ್ವರ್ಯ ನಿಲಯದ ವಿದ್ಯಾಧರ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈತಿಂಗಳ 11ರಂದು ರಾತ್ರಿ ನಾರಾಯಣಮಂಗಲ ಶ್ರೀ ಚೀರುಂಬಾ ದೇವಸ್ಥಾನ ಪರಿಸರದಲ್ಲಿ ನಾನು ಲಾರಿ ನಿಲ್ಲಿಸಿದ್ದೆನೆಂದೂ …

ವ್ಯಾಪಾರಿ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ

ಮುಳ್ಳೇರಿಯ : ಪುಂಡೂರು ಬಳಿಯ ಮಾಳಂಗೈಯಲ್ಲಿ ಅಂಗಡಿ ನಡೆಸುತ್ತಿದ್ದ ಯುವಕ ನೇಣು ಬಿಗಿದು ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಮಾಳಂಗೈ ನಿವಾಸಿ ಮಣಿಕಂಠನ್ (46) ಆತ್ಮಹತ್ಯೆಗೈದ ಯುವಕ. ಅಂಗಡಿಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಇವರು ಈ ಹಿಂದೆ ಕಾರಡ್ಕದಲ್ಲಿ ಶೇಂದಿ ಅಂಗಡಿಯಲ್ಲಿ ಕಾರ್ಮಿಕರಾಗಿದ್ದರು. ದಿವಂಗತರಾದ ಎ.ಕೆ. ಗೋಪಾಲನ್- ಕಲ್ಯಾಣಿ ದಂಪತಿ ಪುತ್ರನಾದ ಮೃತರು ಪತ್ನಿ ಶೈಲಜಾ, ಮಕ್ಕಳಾದ ಕಾರ್ತಿಕ್, ಆದಿ, ಸಹೋದರರಾದ ಎ.ಕೆ. ಕುಮಾರನ್, ಎ.ಕೆ.ಶ್ರೀಧರನ್, ಎ.ಕೆ. ಉಪೇಂದ್ರನ್, ಎ.ಕೆ. ಶಶಿಧರನ್,  …

ಅಪಘಾತಕ್ಕೀಡಾದ ಬೈಕ್ ಕಳವುಗೈದ ಆರೋಪಿ ಬಂಧನ

ಮಂಜೇಶ್ವರ: ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್ ಕಳವುಗೈದ ಆರೋಪಿ ಸೆರೆಗೀಡಾಗಿದ್ದಾನೆ. ಮೀಂಜ ಸಂತಡ್ಕ ನಿವಾಸಿ ಮುಹಮ್ಮದ್ ಮುನ್ನ (21) ಎಂಬಾತನನ್ನು ಮಂಜೇಶ್ವರ ಎಸ್‌ಐ  ವೈಷ್ಣವ್ ರಾಮಚಂದ್ರನ್ ಹಾಗೂ ತಂಡ ಬಂಧಿಸಿದೆ. ಕರ್ನಾಟಕದ ಗದಗ ನಿವಾಸಿಯೂ ಕಾಸರಗೋಡು ನುಳ್ಳಿಪ್ಪಾಡಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಎಂ.ಎನ್. ಸಂತೋಷ್ ಎಂಬವರ ಬೈಕ್ ಕಳವುಗೈದ ಪ್ರಕರಣದಲ್ಲಿ ಮುಹಮ್ಮದ್ ಮುನ್ನನನ್ನು ಬಂಧಿಸಲಾಗಿದೆ. ಸಂತೋಷ್ ಚಲಾಯಿಸಿದ ಬೈಕ್ ಮೇ 1ರಂದು ರಾತ್ರಿ 9.30ಕ್ಕೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು.  ಕಾರಿನ ಹಿಂಬದಿಗೆ ಬೈಕ್ …

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಾತ ಬಂಧನ

ಕುಂಬಳೆ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡ ವ್ಯಕ್ತಿಯನ್ನು ಸೆರೆಹಿಡಿಯಲಾಗಿದೆ. ಕುಂಬಳೆ ಆರಿಕ್ಕಾಡಿ ಬನ್ನಂಗಳ ನಿವಾಸಿ ಅಬ್ದುಲ್ ಜಲೀಲ್ ಯಾನೆ ಜಲ್ಲು (28) ಎಂಬಾತನನ್ನು ಕುಂಬಳೆ ಎಸ್ ಐ ಅನಂತಕೃಷ್ಣನ್ ಆರ್ ಮೆನೋನ್ ಹಾಗೂ ತಂಡ  ಬಂಧಿಸಿದೆ. ೨೦೨೧ರಲ್ಲಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾದ ಹತ್ಯೆಯತ್ನ ಪ್ರಕರಣ, ಕುಂಬಳೆ ಠಾಣೆಯಲ್ಲಿ ದಾಖಲಾದ ಆಮ್ಸ್ ಆಕ್ಟ್ ಪ್ರಕರಣ, ಹೊಡೆದಾಟ, ಗಾಂಜಾ ಮೊದಲಾದ ಪ್ರಕರಣಗಳಲ್ಲಿ ಅಬ್ದುಲ್ ಜಲೀಲ್  ಆರೋಪಿಯಾಗಿದ್ದಾನೆ. ಅನಂತರ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಈಮಧ್ಯೆ ಇತ್ತೀಚೆಗೆ ಈತ …

ಕುಂಬಳೆಯಲ್ಲಿ ಬಸ್ ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮರುಜೀವ: ಇಂಜಿನಿಯರ್ ಸ್ಥಳ ಸಂದರ್ಶಿಸಿ ಪರಿಶೀಲನೆ

ಕುಂಬಳೆ: ಹನ್ನೆರಡು ವರ್ಷಗಳ ಹಿಂದೆ ಕೆಡವಲಾದ ಕುಂಬಳೆ ಬಸ್ ನಿಲ್ದಾಣದ ಬದಲಿಯಾಗಿ ನೂತನ ಬಸ್ ನಿಲ್ದಾಣ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮತ್ತೆ ಕಾಲ ಕೂಡಿ ಬಂದಿದೆ. ನಿರ್ಮಾಣಕ್ಕೆ ಚಾಲನೆ ನೀಡುವ ಅಂಗವಾಗಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಲ್ಕಂತಸ್ತಿನ ಕಟ್ಟಡ ನಿರ್ಮಿ ಸಲಿರುವ ಯೋಜನೆ ಸಿದ್ಧಪಡಿಸ ಲಾಗಿದೆ. ಗ್ರೌಂಡ್ ಫ್ಲೋರ್‌ನಲ್ಲಿ ವಾಹನ ಪಾರ್ಕಿಂಗ್, ಸ್ಯಾನಿಟರಿ ಸೌಕರ್ಯ ಏರ್ಪಡಿಸಲಾಗು ವುದು. ಒಂದು ಹಾಗೂ ಎgಡನೇ ಮಹಡಿಗಳು ಶಾಪಿಂಗ್ ಕಾಂಪ್ಲೆಕ್ಸ್ ಗಳಾಗಿರುವುದು. ನಾಲ್ಕನೇ ಮಹಡಿ ಯಲ್ಲಿ …

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿ ಮಹಾಸಭೆ ಬೀರಂತಬೈಲುನಲ್ಲಿರುವ ಕನ್ನಡ ಅಧ್ಯಾಪಕಭವನದಲ್ಲಿ ನಡೆಯಿತು. ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ್ ಎ. ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಹರ್ಷ ಎಂ.ಪಿ., ಬೇಕಲ ಹೊಸದುರ್ಗ ಉಪಜಿಲ್ಲಾ ಸಮಿತಿ ಅಧ್ಯಕ್ಷ ವಿಠಲ ಅಡ್ವಳ, ಕಾಸರಗೋಡು ಉಪಜಿಲ್ಲಾ ಅಧ್ಯಕ್ಷ ಕುಶ ಪಿ.ಎಲ್, ಕಾರ್ಯದರ್ಶಿ ಪೂರ್ಣಿಮ …

ಹೃದಯಾಘಾತ ಯುವಕ ನಿಧನ

ಬಂದ್ಯೋಡು: ಅಡ್ಕ ಭಗವತೀನಗರ ನಿವಾಸಿ ದಿ| ಕುಂಞಿರಾಮ ಎಂಬವರ ಪುತ್ರ ಕೂಲಿ ಕಾರ್ಮಿಕ ಸುರೇಶ್ (48) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮೃತರು ತಾಯಿ ಯಮುನ, ಸಹೋದರ- ಸಹೋದರಿಯರಾದ ಗೀತ, ಶಶಿಕಲ, ಸಂತೋಷ್, ಸುಮಿತ್ರ, ಸುನಿಲ್, ಹರೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬದಿಯಡ್ಕ, ಕಾಸರಗೋಡಿನಲ್ಲಿ  ಕಾಂಗ್ರೆಸ್‌ನಿಂದ ಹರ್ಷಾಚರಣೆ

ಬದಿಯಡ್ಕ: ಕೇರಳ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್‌ರನ್ನು ಆಯ್ಕೆ ಮಾಡಿರುವುದಕ್ಕೆ ಹರ್ಷ ಸೂಚಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕದಲ್ಲಿ  ಮೆರವಣಿಗೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ನೇತಾರರಾದ ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಶ್ರೀನಾಥ್ ಬದಿಯಡ್ಕ, ರಾಮ ಪಟ್ಟಾಜೆ, ನಾರಾಯಣ ಭಂಡಾರಿ, ಲೋಹಿತಾಕ್ಷ ಪಟ್ಟಾಜೆ, ಕುಮಾರನ್ ನಾಯರ್, ರಜನಿ, ರವಿ ಕುಂಟಾಲುಮೂಲೆ, ಕೃಷ್ಣ ಕುಮಾರ್ ಪಿ, ಗಿರೀಶ್, ನಿಜೀಶ್ ಪಟ್ಟಾಜೆ, ಉದಯ ಕುಂಟಾಲುಮೂಲೆ, ಸತೀಶ್ ಪೆರುಮುಂಡ, ಖಮರುದ್ದೀನ್, ವಿನ್ಸೆಂಟ್ …

ದತ್ತಿನಿಧಿ ಪ್ರಶಸ್ತಿ ಪ್ರದಾನ, ಕನ್ನಡ ಸಂಸ್ಕೃತಿ ಉತ್ಸವ ನಾಳೆ

ಪೈವಳಿಕೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ನಾಳೆ ಬೆಳಿಗ್ಗೆ ೯ರಿಂದ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ೯ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನೀಸ ಸಲೀಂ, ಸೀತಾರಾಮ ಶೆಟ್ಟಿ ಭಂಡಾರಗುತ್ತು ಚಾಲನೆ ನೀಡುವರು. ಬಳಿಕ ಸುಗಮ …