ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಾತ ಬಂಧನ

ಕುಂಬಳೆ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡ ವ್ಯಕ್ತಿಯನ್ನು ಸೆರೆಹಿಡಿಯಲಾಗಿದೆ.

ಕುಂಬಳೆ ಆರಿಕ್ಕಾಡಿ ಬನ್ನಂಗಳ ನಿವಾಸಿ ಅಬ್ದುಲ್ ಜಲೀಲ್ ಯಾನೆ ಜಲ್ಲು (28) ಎಂಬಾತನನ್ನು ಕುಂಬಳೆ ಎಸ್ ಐ ಅನಂತಕೃಷ್ಣನ್ ಆರ್ ಮೆನೋನ್ ಹಾಗೂ ತಂಡ  ಬಂಧಿಸಿದೆ.

೨೦೨೧ರಲ್ಲಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾದ ಹತ್ಯೆಯತ್ನ ಪ್ರಕರಣ, ಕುಂಬಳೆ ಠಾಣೆಯಲ್ಲಿ ದಾಖಲಾದ ಆಮ್ಸ್ ಆಕ್ಟ್ ಪ್ರಕರಣ, ಹೊಡೆದಾಟ, ಗಾಂಜಾ ಮೊದಲಾದ ಪ್ರಕರಣಗಳಲ್ಲಿ ಅಬ್ದುಲ್ ಜಲೀಲ್  ಆರೋಪಿಯಾಗಿದ್ದಾನೆ. ಅನಂತರ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಈಮಧ್ಯೆ ಇತ್ತೀಚೆಗೆ ಈತ ವಳಪಟ್ಟಣದಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ  ಪ್ರಶಾಂತ್, ಮಹೇಶ್ ಎಂಬಿವರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page