ತೂಮಿನಾಡಿನಲ್ಲಿ ತಂಡಗಳ ಮಧ್ಯೆ ಘರ್ಷಣೆ: ಇಬ್ಬರ ಸೆರೆ

ಉಪ್ಪಳ: ಕುಂಜತ್ತೂರು ತೂಮಿನಾಡಿನಲ್ಲಿ ನಿನ್ನೆ ರಾತ್ರಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು,ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಬಲ್ಲಂಕೋಡು ನ್ಯೂ ಹೌಸ್ ಸಯ್ಯದ್ ಅಮೀನ್ (19), ಬಂಗ್ರಮಂಜೇಶ್ವರ ರಹ್ಮತ್ ನಗರ ಅಶ್ಫಾಕ್ ಮಂಜಿಲ್‌ನ ಮೊಹಮ್ಮದ್ ಅಶ್ಫಾಕ್ (18) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನ್ನೆ ರಾತ್ರಿ 11 ಗಂಟೆ ವೇಳೆ ತೂಮಿನಾಡಿನಲ್ಲಿ  ಎರಡು ತಂಡಗಳು ಘರ್ಷಣೆ ನಿರತರಾಗಿರುವ ಬಗ್ಗೆ  ಮಂಜೇಶ್ವರ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ಉಮೇಶ್, ಎಎಸ್‌ಐ ಬೈಜು,  ಪ್ರೊಬೆಷನರಿ …

ಸಚಿವರ ಹೆಸರು ಇಂದು ಘೋಷಣೆ: ಮೇ 21ರಂದು ಶಾಸಕರ ಪ್ರಮಾಣವಚನ

ತಿರುವನಂತಪುರ: ಯುಡಿಎಫ್ ನೇತೃತ್ವದ ಸಚಿವ ಸಂಪುಟ  ಸೋಮವಾರ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಲಿರು ವಂತೆಯೇ ಸಚಿವ ಸಂಪುಟದಲ್ಲಿ ಒಳಗೊಳ್ಳಲಿರುವ ಸಚಿವರುಗಳ ಹೆಸರು ಕಾಂಗ್ರೆಸ್ ಸೇರಿದಂತೆ ಇತರ ಘಟಕ ಪಕ್ಷಗಳು ಇಂದು ಘೋಷಿಸಲಿವೆ. ಇದಕ್ಕಾಗಿರುವ ಬಿರುಸಿನ ಚರ್ಚೆ ನಿನ್ನೆಯಿಂದಲೇ ಆರಂಭಗೊಂಡಿದೆ.  ಅಂತಿಮ  ತೀರ್ಮಾನ ಉಂಟಾಗಲಿದೆ. ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸೋಮವಾರ ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದಕ್ಕಿರುವ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ಸ್ಟೇಡಿಯಂನಲ್ಲಿ 10 ಸಾವಿರ ಮಂದಿಗೆ ಆಸನ ಸೌಕರ್ಯ ಏರ್ಪಡಿಸಲಾಗುತ್ತಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ …

ಆಟೋ ಚಾಲಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಆಟೋ ಚಾಲಕ  ಮನೆಯ ಸಿಟೌಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸೂರಂಬೈಲು ನಿವಾಸಿ  ಪುರುಷೋತ್ತಮ ಗಟ್ಟಿ (54) ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ 6.30ರ ವೇಳೆ ಇವರು ಮನೆಯ ಸಿಟೌಟ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ  ಕಂಡುಬಂದಿದ್ದರು. ಕೂಡಲೇ ಮನೆಯವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಅಷ್ಟರೊಳಗೆ ಅವರು ಮೃತಪಟ್ಟಿದ್ದಾರೆನ್ನಲಾಗಿದೆ. ಪುರುಷೋತ್ತಮ ಗಟ್ಟಿ ಈ ಹಿಂದೆ ಕುಂಬಳೆಯಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ದಿವಂಗತರಾದ ಕೃಷ್ಣ ಗಟ್ಟಿ-ರಾಧಾ ದಂಪತಿಯ …

ಉಳಿಯತ್ತಡ್ಕದಲ್ಲಿ ಯುವಕರ ಮಧ್ಯೆ ಘರ್ಷಣೆ: ಓರ್ವನಿಗೆ ಇರಿತ

ಕಾಸರಗೋಡು: ಮಧೂರು ಸಮೀಪದ ಉಳಿಯತ್ತಡ್ಕ ಆಜಾದ್‌ನಗರ ರಸ್ತೆ ಬಳಿ ನಿನ್ನೆ  ರಾತ್ರಿ ಯುವಕರ ಮಧ್ಯೆ  ಘರ್ಷಣೆ ಉಂಟಾಗಿ ಅದರಲ್ಲಿ ಓರ್ವ ಇರಿತ ಕ್ಕೊಳಗಾಗಿದ್ದಾನೆ. ಆತನನ್ನು  ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಜಾದ್‌ನಗರದ ಇರ್ಫಾನ್ ಇರಿತಕ್ಕೊಳಗಾಗಿದ್ದ ಯುವಕ. ನಿನ್ನೆ ರಾತ್ರಿ ಸುಮಾರು 9.30ರ ವೇಳೆಗೆ ಈ ಘರ್ಷಣೆ ನಡೆದಿದೆ. ಇದರಲ್ಲಿ ಅಖಿಲ್ ಎಂಬಾತ ಗಾಯಗೊಂಡಿ ದ್ದನು. ಆತ ಚಿಕಿತ್ಸೆಗಾಗಿ ನಿನ್ನೆ ಆಸ್ಪತ್ರೆಗೆ ಬಂದಿದ್ದು ಚಿಕಿತ್ಸೆ ಪಡೆಯುವ ವೇಳೆ ಅಲ್ಲಿಗೆ ಪೊಲೀಸರು ಆಗಮಿಸಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿರು ವುದಾಗಿ  ಪೊಲೀಸರು ತಿಳಿಸಿದ್ದಾರೆ. …

ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ: ಗರ್ಭಿಣಿ ಮೃತ್ಯು

 ಕಲ್ಲಿಕೋಟೆ: ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ ಯಾಗಿ ಗರ್ಭಿಣಿ ಮೃತಪಟ್ಟ ದಾರುಣ ಘಟನೆ ಕಲ್ಲಿಕೋಟೆ ಕಕ್ಕರಮುಖ್ ಎಂಬಲ್ಲಿ ಸಂಭವಿಸಿದೆ. ಕಕ್ಕರಮುಖ್ ನಿವಾಸಿ ರಜಿಲ್‌ಲಾಲು ಎಂಬವರ ಪತ್ನಿ ಸೋನ (27)ಎಂಬವರು ಮೃತಪಟ್ಟ ದುರ್ದೈವಿ. ಕಾರು ಚಲಾಯಿಸುತ್ತಿದ್ದ ರಜಿಲ್‌ಲಾಲು ಗಂಭೀರ ಗಾಯಗೊಂಡಿದ್ದು, ಇವರಲ್ಲಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಿನ್ನೆ  ರಾತ್ರಿ 9 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಸೋನಾರನ್ನು ಪೇರಾಂಬ್ರದ ಆಸ್ಪತ್ರೆಗೆ  ಕರೆದೊಯ್ದು ತಪಾಸಣೆಗೈದ ಬಳಿಕ ಮರಳಿ ಮನೆಗೆ ಬರುತ್ತಿದ್ದಾಗ ಕಾರು ಬೆಂಕಿಗಾಹುತಿಯಾಗಿದೆ. …

ಕುಟುಂಬ ಕಲಹ ಪರಿಹರಿಸಲು ತಲುಪಿದ ಪೊಲೀಸ್‌ಗೆ ಇರಿದು ಗಾಯ: ಸಹೋದ್ಯೋಗಿ ಸೆರೆ

ತಿರುವನಂತಪುರ: ಕುಟುಂಬ ಕಲಹ ಪರಿಹರಿಸಲು ತಲುಪಿದ ಪೊಲೀಸ್‌ಗೆ ಇರಿದು ಗಾಯಗೊಳಿಸಿದ ಘಟನೆಯಲ್ಲಿ ಸಹೋದ್ಯೋಗಿ ಪೊಲೀಸ್‌ನನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ ವಿಕಾಸ್‌ಭವನ್ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಇತ್ತೀಚೆಗೆ ಘಟನೆ ನಡೆದಿದೆ. ಎ.ಆರ್ ಕ್ಯಾಂಪ್‌ನ ಉದ್ಯೋಗಿಯಾದ ಅನೀಶ್‌ನನ್ನು ಸೆರೆಹಿಡಿಯಲಾಗಿದೆ. ಮ್ಯೂಸಿಯಂ ಪೊಲೀಸ್ ಠಾಣೆಯ ಅಧಿಕಾರಿಯಾದ ಅನ್ಸಾರ್‌ಗೆ ಇರಿಯಲಾಗಿದೆ. ಕಿವಿಗೆ ಗಾಯಗೊಂಡ ಅನ್ಸಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನೆರೆಮನೆ ನಿವಾಸಿಯಾದ ಪೊಲೀಸ್‌ನ ಮನೆಯ ಕುಟುಂಬ ಕಲಹ ಪರಿಹರಿಸಲು ಇವರು ತಲುಪಿದ್ದರು. ಅನೀಶ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾನೆಂದು ೧೧೨ರಲ್ಲಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅನ್ಸಾರ್ ಸ್ಥಳಕ್ಕೆ …

ಸಾರ್ವಜನಿಕ ಸ್ಥಳದ ಮರ ತೆರವು : ಪೊಲೀಸ್ ಕೇಸು ದಾಖಲು

ಕಾಸರಗೋಡು:  ಬೇಕಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಪನಯಾಲ್‌ನಲ್ಲಿ ಲೋಕೋಪಯೋಗಿ ರಸ್ತೆ ಬದಿಯ 100ರಷ್ಟು ಮರಗಳನ್ನು ಜೆಸಿಬಿ ಉಪಯೋಗಿಸಿ ಕಡಿದು ತೆರವುಗೊಳಿಸಿದ ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಾಞಂಗಾಡ್ ಲೋಕೋಪಯೋಗಿ ಕಚೇರಿಯ ಅಸಿಸ್ಟೆಂಟ್ ಇಂಜಿನಿಯರ್‌ರ ದೂರಿನಂತೆ ಪಳ್ಳಾರ್ ನಿವಾಸಿ ವಿನಾಯಕ ಭಟ್ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೆರಿಯಾಟಡ್ಕಂ- ಬೇಕಲ ರಸ್ತೆಯ ಪನಯಾಲ್, ಪಳ್ಳೋರತ್‌ನಲ್ಲಿದ್ದ ಹಲವಾರು ಮರಗಳನ್ನು  ಜೆಸಿಬಿ ಉಪಯೋಗಿಸಿ ಕಡಿದು ನಾಶಪಡಿಸಿ ಸರಕಾರಕ್ಕೆ ಲಕ್ಷ ರೂ.ಗಳ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಬುಧವಾರ …

ಮಾಯಿಪ್ಪಾಡಿಗುತ್ತು ತರವಾಡು ಮನೆಯಲ್ಲಿ ದೈವಕೋಲ

ಮಾಯಿಪ್ಪಾಡಿ: ಮಾಯಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ ಮತ್ತು ಶ್ರೀ ಕೊರತಿ ದೈವದ ಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗಣಹೋಮ, ತಂಬಿಲ, ಪಾನಕಪೂಜೆ, ಅನ್ನ ಸಂತರ್ಪಣೆ ಮಾಯಿಪ್ಪಾಡಿ ಶ್ರೀ ದುರ್ಗಾ ಮಹಿಳಾ ಭಜೇಶ್ವರಿ ಭಜನಾ ಸಂಘ ಮತ್ತು ಮಾಯಿಪಾಡಿಗುತ್ತು ಕುಟುಂ ಬಸ್ಥರಿಂದ ಭಜನೆ ನಡೆಯಿತು. ಪುತ್ತೂರುಕೊಟ್ಯದಿಂದ ಮಾಯಿಪ್ಪಾಡಿಗುತ್ತು ತರವಾಡಿಗೆ ಭಂಡಾರ ಆಗಮಿಸಿತು. ಎರಡು ಹರಕೆಯ ಕೊರತಿಕೋಲ ಸೇರಿದಂತೆ ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ರಾಪರ್‌ ವೇಡನ್‌ನಿಂದ ವಶಪಡಿಸಿದ್ದು ಯಥಾರ್ಥ ಹುಲಿ ಹಲ್ಲು: ಅರಣ್ಯ ಇಲಾಖೆಯಿಂದ ದೋಷಾರೋಪ ಪಟ್ಟಿ ಸಲ್ಲಿಸಲು ನಿರ್ಧಾರ

ಕೊಚ್ಚಿ: ಹುಲಿಯ ಹಲ್ಲು ವಶಪಡಿಸಿದ ಪ್ರಕರಣದಲ್ಲಿ ರಾಪರ್‌ವೇಡನ್‌ಗೆ ತಿರುಗೇಟು ಲಭಿಸಿದೆ. ವಶಪಡಿಸಿರುವುದು ನಿಜವಾದ ಹುಲಿಹಲ್ಲು ಆಗಿದೆ ಎಂದು ಖಚಿತಪಡಿಸಲಾಗಿದೆ. ಕೊಲ್ಕತ್ತದ ಜುವೋಲಜಿ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಹುಲಿ ಹಲ್ಲು ಎಂದು ಖಚಿತಪಡಿಸಲಾಗಿದೆ. ಪ್ರಕರಣದಲ್ಲಿ ಆರಣ್ಯ ಇಲಾಖೆ ಕೂಡಲೇ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ಅನಧಿಕೃತವಾಗಿ ಹುಲಿ ಹಲ್ಲು  ಕೈವಶವಿರಿಸಿಕೊಂಡಿರುವುದಕ್ಕೆ, ಮೃಗ ಬೇಟೆ ನಡೆಸಿರುವುದಾಗಿ ಆರೋಪಿಸಿ ವೇಡನ್ ವಿರುದ್ಧ ಈ ಮೊದಲೇ ಅರಣ್ಯ ಇಲಾಖೆ ಕೇಸು ದಾಖಲಿಸಿತ್ತು. ಆದರೆ ನಿಜವಾದ ಹುಲಿ ಹಲ್ಲು ಅಲ್ಲವೆಂದು ತಮಿಳುನಾಡಿನಿಂದ ಅಭಿಮಾನಿಯೋರ್ವ ಕೊಡುಗೆಯಾಗಿ ನೀಡಿರುವುದಾಗಿಯೂ …

ಕಾಂಗ್ರೆಸ್ ಮುಖಂಡ ಗಂಗಾಧರನ್ ನಾಯರ್ ಸಂಸ್ಮರಣೆ

ಪೈವಳಿಕೆ : ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾಧ್ಯಕ್ಷ ಪಿ. ಗಂಗಾಧರನ್ ನಾಯರ್‌ರ ಸಂಸ್ಮರಣಾ ಕಾರ್ಯಕ್ರಮ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಜರುಗಿತು. ಗಂಗಾಧರನ್ ನಾಯರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಹಿರಿಯ ಕಾರ್ಯಕರ್ತರಾದ ಅಬ್ದುಲ್ಲ ಶಾ, ಅಸಿಸ್ ಕಟ್ಟೆ, ಎಡ್ವರ್ಡ್ ಡಿ ಸೋಜ ಭಾಗವಹಿಸಿದರು. ಅಬ್ದುಲ್ ರಸಾಕ್ ಸ್ವಾಗತಿಸಿ, ಗಂಗಾಧರ ನಾಯಕ್ ವಂದಿಸಿದರು.