ಅನಂತಪುರದಲ್ಲಿ ಆಯಿಲ್ ರೀ ಸೈಕ್ಲಿಂಗ್ ಘಟಕ: ಮಲಿನೀಕರಣ ನಿಯಂತ್ರಣ ವ್ಯವಸ್ಥೆಗಳನ್ನು ಖಚಿತಪಡಿಸಿದ ಬಳಿಕವೇ ಕಾರ್ಯಾಚರಿಸಲು ಅನುಮತಿ- ಜಿಲ್ಲಾಧಿಕಾರಿ

ಕುಂಬಳೆ: ಅನಂತಪುರ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುವ ಆಯಿಲ್ ರೀ ಸೈಕ್ಲಿಂಗ್ ಘಟಕದ ವಿರುದ್ಧ ಇರುವ ದೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಮಲಿನೀಕರಣ ನಿಯಂತ್ರಣ ವ್ಯವಸ್ಥೆಗಳು ಖಚಿತಪಡಿಸಿದ ಬಳಿಕವೇ ಇದರ ಚಟುವಟಿಕೆಗಳಿಗೆ ಅನುಮತಿ ನೀಡುವು ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಲಿನೀಕರಣ ನಿಯಂತ್ರಣ ಬೋರ್ಡ್ ಎನ್‌ವಯರೋನ್‌ಮೆಂಟಲ್ ಇಂಜಿನಿಯರ್‌ರಿಗೆ ಈ ಬಗ್ಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ. ಈ ಸಂಸ್ಥೆಯಲ್ಲಿ ಮಲಿನೀಕರಣ ನಿಯಂತ್ರಣ ಬೋರ್ಡ್ ನಡೆಸಿದ ಪರಿಶೀಲನೆ ಹಾಗೂ ಸಲ್ಲಿಸಿದ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. …

ರಿಕ್ಷಾ ಚಾಲಕ ನಿಧನ

ಮುಳ್ಳೇರಿಯ: ಕಾರಡ್ಕ ಬಳಿಯ ಅಡ್ಕಂ ನಿವಾಸಿ ರಿಕ್ಷಾ ಚಾಲಕರಾಗಿದ್ದ ಮೋಹನನ್ ಎಂ. (76) ನಿಧನ ಹೊಂದಿದರು. ಅಸೌಖ್ಯ ತಗಲಿ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ಮುಂಬೈ, ಬೆಂಗಳೂರು, ಕಾಸರಗೋಡು ಮೊದಲಾದ ಕಡೆ ಚಾಲಕನಾಗಿ ದುಡಿದಿದ್ದರು. ಇವರ ಪತ್ನಿ ಜಾನಕಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸಿ. ಮನೋಜ್, ಸಿ. ವಿನೋಜ್, ಸೊಸೆ ವಾಣಿಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಸಿ. ಸನೋಜ್ ಈ ಹಿಂದೆ ನಿಧನ ಹೊಂದಿದ್ದಾರೆ.

ಕಾಸರಗೋಡಿನ ಪ್ರಗತಿಯ ನೆಗೆತಕ್ಕೆ 100 ಕೋಟಿ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಕರಡು ಸಮರ್ಪಣೆ

ಕಾಸರಗೋಡು: ಈ ಆರ್ಥಿಕ ವರ್ಷದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗಾಗಿರುವ 1೦೦ ಕೋಟಿ ರೂ.ಗಳ ಕರಡು ವಾರ್ಷಿಕ ಯೋಜನೆಯನ್ನು ಸಲ್ಲಿಸಲಾಗಿದೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋ ಧ್ಯಮ, ಕೃಷಿ ಮೊದಲಾದ ವಲಯಗಳಲ್ಲಿ ಭಾರೀ ಪ್ರಗತಿಯನ್ನು ಗುರಿ ಇರಿಸಿ 27 ಪ್ರಧಾನ ಯೋಜನೆಗಳನ್ನು ಸಮಗ್ರವಾದ ಈ ಕರಡುನಲ್ಲಿ ಸೇರಿಸಿಕೊಳ್ಳಲಾಗಿದೆ. ಜಿಲ್ಲೆಯ ದೀರ್ಘಕಾಲದ ಬೇಡಿಕೆಗಳಿಗೆ ಪರಿಹಾರ ಕಾಣುವ ರೀತಿಯಲ್ಲಿ ಯೋಜನೆಗಳಿಗೆ ರೂಪು ನೀಡಲಾಗಿದೆ. ಆರೋಗ್ಯ ವಲಯಕ್ಕೆ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಯೋಜನೆಯಲ್ಲಿ ಬಹುಪಾಲು ಪರಿಗಣನೆ ನೀಡಲಾಗಿದೆ. ಕಾಸರಗೋಡು ಸರಕಾರಿ ಮೆಡಿಕಲ್ …

ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ 24 ದಿನದಲ್ಲಿ 2.71 ಕೋಟಿ ರೂ. ಸಂಗ್ರಹ: ಅಧಿಕಾರಿಗಳಿಂದ ಬಹಿರಂಗ

ಕುಂಬಳೆ: ಕೇವಲ 24 ದಿನದ ಕಾರ್ಯಾಚರಣೆ ಮಧ್ಯೆ ಆರಿಕ್ಕಾಡಿ ಟೋಲ್ ಪ್ಲಾಜಾ ಮೂಲಕ 2.71 ಕೋಟಿ ರೂ.ಗಳಿಗೂ ಹೆಚ್ಚು ಟೋಲ್ ರೂಪದಲ್ಲಿ ಸಂಗ್ರಹಿಸಲಾ ಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಹಿರಂಗಪಡಿಸಿದೆ. ಮಾಹಿತಿ ಹಕ್ಕು ಪ್ರಕಾರ ನೀಡಿದ ಮನವಿಗೆ ಉತ್ತರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವಿಷಯ ಬಹಿರಂಗಪಡಿಸಿದೆ. ಟೋಲ್ ಪ್ಲಾಜಾದ ನಿರ್ಮಾಣಕ್ಕೆ 2.15 ಕೋಟಿ ರೂ. ವೆಚ್ಚವಾಗಿರುವು ದಾಗಿಯೂ ಉತ್ತರದಲ್ಲಿ ತಿಳಿಸ ಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಣ್ಣೂರು ಪ್ರೊಜೆಕ್ಟ್ ಇಂಪ್ಲಿಮೆಂಟೇಶನ್ ಘಟಕದಿಂದ ಮಾಹಿತಿ ಹಕ್ಕು …

ಕುಂಬಳೆ ಹಳೆ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸದಿದ್ದಲ್ಲಿ ಚಳವಳಿ-ಬಿಜೆಪಿ

ಕುಂಬಳೆ: ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸಲು ಹಾಗೂ ಪ್ರಯಾಣಿ ಕರನ್ನು ಇಳಿಸಿ ಹತ್ತಿಸಲು ಕೂಡಲೇ ವ್ಯವಸ್ಥೆ ಏರ್ಪಡಿಸ ಬೇಕೆಂದೂ ಇಲ್ಲದಿದ್ದಲ್ಲಿ ಚಳವಳಿ ನಡೆಸಲಾ ಗುವುದೆಂದು ಬಿಜೆಪಿ ಪಂಚಾ ಯತ್ ಸಮಿತಿ ಮುನ್ನೆಚ್ಚರಿಕೆ ನೀಡಿದೆ 40 ವರ್ಷಗಳ ಹಿಂದೆ ಸ್ಥಾಪಿಸಿದ ಬಸ್ ನಿಲ್ದಾಣವನ್ನು ಖಾಸಗಿ ಶಾಪಿಂಗ್ ಕಾಂಪ್ಲೆಕ್ಸ್‌ನವರಿಗೆ ಬಾಡಿಗೆ   ನೀಡುವುದ ಕ್ಕಾಗಿ ಬದಲಾಯಿಸುವುದು ಸರಿಯಲ್ಲ ವೆಂದು ಸಭೆ ತಿಳಿಸಿದೆ.  ಹಳೆ ಬಸ್ ನಿಲ್ದಾಣದ ಸಮೀಪದಲ್ಲೇ ಕುಂಬಳೆ ಪಂಚಾಯತ್‌ನ ಸರಕಾರಿ ಕಚೇರಿಗಳು ನೆಲೆಗೊಂಡಿವೆ. ಆದರೆ ಈಗ ಬಸ್ …

ಚಿರತೆಯ ಸೆರೆಗೆ ಗೂಡು ಇರಿಸಿದ ಸ್ಥಳಕ್ಕೆ ಬಿಜೆಪಿ ಪದಾಧಿಕಾರಿಗಳು ಭೇಟಿ

ಮುಳ್ಳೇರಿಯ: ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗೂಡು ಸ್ಥಾಪಿಸಿದ ಕಾರಡ್ಕ ಪಂಚಾಯತ್‌ನ 4ನೇ ವಾರ್ಡ್ ಆಲಂತಡ್ಕ ಜಯನಗರಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಪಂಚಾಯತ್ ಅಧ್ಯಕ್ಷೆ ಎಂ. ಜನನಿ, ಉಪಾಧ್ಯಕ್ಷ ದಾಮೋದರ ರಾವ್ ಸಹಿತ ಬಿಜೆಪಿ ತಂಡ ಭೇಟಿ ನೀಡಿತು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ ಕೆ., ಜನಪ್ರತಿನಿಧಿಗಳಾದ ವಸಂತಿ ಎ, ಬಾಲಕೃಷ್ಣನ್ ಎ, ಸವಿತಕುಮಾರಿ ಪಿ, ಪ್ರಶಾಂತ ಎಂ, ಸಿಡಿಎಸ್ ಚೆಯರ್ ಪರ್ಸನ್ ಪೂರ್ಣಿಮ ಸ್ಥಳ …