ಕೃಷಿಕ ಕೆರೆಗೆ ಹಾರಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ:  ಕಾರಡ್ಕ ಬಳಿಯ ಕೊಟ್ಟಂಗುಳಿಯಲ್ಲಿ ಕೃಷಿಕನೋರ್ವ ಕೆರೆಗೆ ಹಾರಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆರೆಗೆ ಹಾರುವ ಮೊದಲು ಕೈಯ ನರ ಕತ್ತರಿಸಿರುವು ದಾಗಿಯೂ ಸಂಶಯಿಸಲಾಗುತ್ತಿದೆ. ಕೊಟ್ಟಂಗುಳಿಯ ಕುಂಞಂಬು ನಾಯರ್‌ರ ಪುತ್ರ  ಅಜಿತ್ ಕುಮಾರ್ (43) ಮೃತ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ ಅಜಿತ್ ಕುಮಾರ್ ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ನಡೆಸಿದ ಹುಡು ಕಾಟ ವೇಳೆ ಮನೆ ಸಮೀಪದ ಅಡಿಕೆ ತೋಟದ ಕೆರೆಯಲ್ಲಿ  ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಮೇಲಕ್ಕೆತ್ತಿ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಈ  ಹಿಂದೆ ಮಡಿಕೇರಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಅಜಿತ್ ವ್ಯಾಪಾರದಲ್ಲಿ ನಷ್ಟ ಉಂಟಾದು ದರಿಂದ ಭಾರೀ ಆರ್ಥಿಕ ಸಂದಿಗ್ಧತೆಯನ್ನು ಎದುರಿಸುತ್ತಿ ದ್ದರೆಂದು ಹೇಳಲಾಗುತ್ತಿದೆ. ಅನಂತರ ಊರಿಗೆ ಮರಳಿ ಕೃಷಿಯಲ್ಲಿ ಸಕ್ರಿಯರಾಗಿದ್ದರು. ಘಟನೆಗೆ ಸಂಬಂಧಿಸಿ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತರು ತಾಯಿ ಮಾಲತಿ, ಪತ್ನಿ ಚೈತ್ರ, ಒಂದು ಮಗು, ಸಹೋದರಿ ಅಜಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page