ಕಟ್ಟಿ ಹಾಕಿದ ಸಾಕುನಾಯಿ ಅಜ್ಞಾತ ಪ್ರಾಣಿ ದಾಳಿಗೆ ಬಲಿ : ಚಿರತೆ ಕೊಂದಿರಬಹುದೆಂಬ ಶಂಕೆ; ಬೆಳ್ಳೂರಿನಲ್ಲಿ ಭೀತಿ ಸೃಷ್ಟಿ

ಬೆಳ್ಳೂರು: ಮನೆ ಅಂಗಳದಲ್ಲಿ ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಅಜ್ಞಾತ ಪ್ರಾಣಿ ಕಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ನಾಟೆಕಲ್ಲು ಬಳಿಯ ಜಾಲಮೂಲೆ ಎಂಬಲ್ಲಿನ ಲೀಲಾ ಎಂಬವರ ಸಾಕು ನಾಯಿ ಸಾವಿಗೀಡಾಗಿದೆ. ನಾಯಿಯನ್ನು ಕೊಂದು ಅರೆಬರೆ ಮಾಂಸವನ್ನು ತಿಂದ ಸ್ಥಿತಿಯಲ್ಲಿ ಕಂಡು ಬಂದಿದೆ. ಇಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ನಾಯಿ ಸಾವಿಗೀಡಾಗಿರುವುದು ಕಂಡು ಬಂದಿದೆ. ನಾಯಿಯ ದೇಹದಲ್ಲಿ ಅಜ್ಞಾತ ಪ್ರಾಣಿಯ ಕಡಿತದಿಂದ ಉಂಟಾದ ಗಾಯ ಕಂಡು ಬಂದಿದೆ. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು …

ಯುವಕನೊಂದಿಗೆ ನಿಂತಿರುವ ಫೋಟೋ ಪತಿಗೆ ರವಾನೆ, ಸೋಶ್ಯಲ್ ಮೀಡಿಯಾ ಮೂಲಕ ಪ್ರಚಾರ ಆರೋಪ: ಯುವತಿ ದೂರಿನಂತೆ ಯುವಕನ ವಿರುದ್ಧ ಕೇಸು

ಮಂಜೇಶ್ವರ: ಯುವಕನೊಂದಿಗೆ ನಿಂತಿರುವ ಫೋಟೋವನ್ನು ಪತಿಯ ಫೇಸ್ ಬುಕ್ ಖಾತೆ ಹಾಗೂ ಇನ್‌ಸ್ಟಾಗ್ರಾಂಗೆ ಕಳುಹಿಸಿಕೊಟ್ಟು, ಪತಿ ಹಾಗೂ ಮಗುವನ್ನು ಕೊಲ್ಲುವುದಾಗಿ ಫೋನ್ ಮೂಲಕ ಬೆದರಿಕೆಯೊಡ್ಡಿದ ಬಗ್ಗೆ ದೂರಲಾಗಿದೆ.  ಮಂಜೇಶ್ವರ ಪಾವೂರಿನ 37ರ ಹರೆಯದ ಯುವತಿ ನೀಡಿದ ದೂರಿನಂತೆ ಕುಂಜತ್ತೂರಿನ ಇಬ್ರಾಹಿಂ ಖಲೀಲ್ (32) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೇ 29ರಂದು ಮಧ್ಯಾಹ್ನ 12 ಗಂಟೆ ಹಾಗೂ 30ರಂದು ಬೆಳಿಗ್ಗೆ 10.44ರ ಮಧ್ಯೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರುಗಾರ್ತಿ ಹಾಗೂ ಇಬ್ರಾಹಿಂ ಖಲೀಲ್ …

ಬೆಳ್ಳಿಪ್ಪಾಡಿಯಲ್ಲಿ ಕಾಡಾನೆ ದಾಳಿಯಿಂದ ಕೃಷಿ ನಾಶ: ಅಧಿಕಾರಿಗಳಿಂದ ಮೌನವೆಂದು ಆರೋಪ

ದೇಲಂಪಾಡಿ: ಪಂಜಿಕಲ್ ಬೆಳ್ಳಿಪ್ಪಾಡಿ ಪರಿಸರದಲ್ಲಿ ಆನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿರುವುದಾಗಿ ಸ್ಥಳೀಯರು ದೂರಿದ್ದಾರೆ. ಕಳೆದ ಹಲವು ತಿಂಗಳಿಂದ ಈ ಪ್ರದೇಶದಲ್ಲಿ ರಾತ್ರಿ ವೇಳೆ ಆನೆಗಳು ದಾಳಿ ನಡೆಸುತ್ತಿದ್ದು ಕಂಗು, ತೆಂಗು, ಬಾಳೆ ಕೃಷಿಗಳನ್ನು ನಾಶಪಡಿಸುತ್ತಿರುವುದಾಗಿ ದೂರಿದ್ದಾರೆ. ಮೊನ್ನೆ ರಾತ್ರಿ ಬೆಳ್ಳಿಪ್ಪಾಡಿ ವಿ.ಬಿ. ಶ್ರೀನಿಲಯ ಭಟ್‌ರ ತೋಟಕ್ಕೆ ಆನೆಗಳು ದಾಳಿಯಿಟ್ಟು ಕೃಷಿನಾಶಗೈದಿವೆ. ಈ ಪರಿಸರಕ್ಕೆ ಅರಣ್ಯಾಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ನಿನ್ನೆ ಹಗಲು ಹೊತ್ತಲ್ಲಿ ಪರಪ್ಪ ಫಾರೆಸ್ಟ್ ಅಧಿಕಾರಿಗಳು ಬಂದು ನೋಡಿ ಹೋಗಿದ್ದು, ಆದರೆ ರಾತ್ರಿ ವೇಳೆಯಲ್ಲಿ …

ಸಾರಣೆ ಮೇಸ್ತ್ರಿ ಗ್ಯಾರೇಜ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಸಾರಣೆ ಮೇಸ್ತ್ರಿಯಾದ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರುವಾಡ್ ಭಜನಾ ಮಂದಿರ ಸಮೀಪದ ಸತೀಶ್ (35) ಎಂಬವರು ಮೃತಪಟ್ಟ ವ್ಯಕ್ತಿ.  ನಿನ್ನೆ ಮುಂಜಾನೆ 1 ಗಂಟೆ ವೇಳೆ ಪೆರುವಾಡ್‌ನ ಮುಚ್ಚುಗಡೆಗೊಳಿಸಿದ  ಗ್ಯಾರೇಜ್‌ನೊಳಗೆ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಮೊನ್ನೆ ರಾತ್ರಿ 8 ಗಂಟೆ ವೇಳೆ ಸತೀಶ್ ತಾಯಿಗೆ ಫೋನ್ ಕರೆ ಮಾಡಿ ಮಾತನಾಡಿದ್ದ ರೆನ್ನಲಾಗಿದೆ. ಅನಂತರ ಸತೀಶ್ ನಾಪತ್ತೆಯಾಗಿದ್ದು, ಇದರಿಂದ ಮನೆಯವರು ಅವರಿಗೆ ಫೋನ್ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ …

ಗೃಹಿಣಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಗೃಹಿಣಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ತಾಳಿಪಡ್ಪು ಕೊಳ್ಕೆಬೈಲಿನ ಶ್ರುತಿ ನಿವಾಸದ ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಎ. ದುಗ್ಗಪ್ಪ ಪೂಜಾರಿಯವರ ಪತ್ನಿ ವಿಶಾಲಾಕ್ಷಿ ಕೋಟ್ಯಾನ್ (62) ಸಾವನ್ನಪ್ಪಿದ ಮಹಿಳೆ. ಇವರು ನಿನ್ನೆ ಬೆಳಿಗ್ಗೆ ಮನೆ ಪಕ್ಕದ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಬಗ್ಗೆ ನೀಡಲಾದ ಮಾಹಿತಿ ಯಂತೆ  ಕಾಸರಗೋಡು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು  ಬಾವಿಯಿಂದ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಕಾಸರಗೋಡು ಪೊಲೀಸರು …

ರಾಜ್ಯದಲ್ಲಿ ಶಾಲಾ ಪ್ರವೇಶೋತ್ಸವ ಆರಂಭ: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ

ಕಾಸರಗೋಡು: 2026-27ನೇ ಶೈಕ್ಷಣಿಕ ವರ್ಷ ಇಂದು ಆರಂಭಗೊಂ ಡಿದ್ದು, ಇದರಂತೆ ಒಂದನೇ ತರಗತಿಗಳಿಗಿ ರುವ ಚಿಣ್ಣರ ಪ್ರವೇಶೋತ್ಸವ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇಂದು ಬೆಳಿಗ್ಗೆ ಅದ್ದೂರಿ ಹಾಗೂ ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದರ ರಾಜ್ಯಮಟ್ಟದ ಉದ್ಘಾಟನೆಯಲ್ಲಿ ತಿರುವನಂತಪುರ ಪಟ್ಟ ಸರಕಾರಿ ಗೇಲ್ಸ್ ಎಚ್‌ಎಸ್‌ಎಸ್‌ನಲ್ಲಿ ಇಂದು ಬೆಳಿಗ್ಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟನೆ ನೆರವೇರಿಸಿದರು. ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅಧ್ಯಕ್ಷತೆ ವಹಿಸಿದರು. ಒಂದನೇ ವರ್ಷಕ್ಕೆ ಸೇರ್ಪಡೆಗೊಳ್ಳುವ ಚಿಣ್ಣರಿಗೆ ವರ್ಣರಂಜಿತ ಟೋಪಿಗಳನ್ನು ತೊಡಿಸಿ ಹಾಗೂ …

ಮಿಲ್ಮಾದಿಂದ ಹೊಸ ಹಾಲು ಮಾರುಕಟ್ಟೆಗೆ

ಮಂಜೇಶ್ವರ: ಮಿಲ್ಮಾ ಕಾಸರಗೋಡು ಡೈರಿ ವತಿಯಿಂದ ಮಂಜೇಶ್ವರ, ಉಪ್ಪಳ, ಕುಂಬಳೆ ಮತ್ತು ಬದಿಯಡ್ಕ ವ್ಯಾಪ್ತಿಯ ಗ್ರಾಹಕರಿಗಾಗಿ ಹೊಸ ಮಾದರಿಯ ಮಿಲ್ಮಾ ಹೋಮೋಜೆ ನೈಸ್‌ಡ್ ರಿಚ್ ಹಾಲು ಇಂದಿನಿಂದ ಲಭ್ಯವಾಗಲಿದೆ.  ಈ ಹಾಲು ಶೇ. 4.5ರಷ್ಟು ಫ್ಯಾಟ್ ಹೊಂದಿದ್ದು, ಅತ್ಯಂತ ಗುಣಮಟ್ಟದಿಂದ ಕೂಡಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಲೆಯೇ ಇಲ್ಲದ ಕುಂಬಳೆ ಪಂಚಾಯತ್ ತೀರ್ಮಾನ :ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ

ಕುಂಬಳೆ: ಕುಂಬಳೆ ಪಂಚಾ ಯತ್‌ನಲ್ಲಿ ತೀರ್ಮಾನಗಳಿಗೆ ಬೆಲೆ ಇಲ್ಲವೆಂದು ಸ್ಥಳೀಯರು ದೂರುತ್ತಾರೆ. ಕುಂಬಳೆಯ ಟ್ರಾಫಿಕ್ ಪರಿಷ್ಕಾರದಂಗ ವಾಗಿ ಮಾಜಿ ಅಧ್ಯಕ್ಷ ಬಸ್ ಪಾರ್ಕಿಂಗ್ ಹಲವು ಕಡೆಗಳಿಗೆ ಬದಲಾಯಿಸಿದ್ದರು. ಇದನ್ನು ಹೆಚ್ಚು ಕಾಲ ಬಾಳಲು ಬಿಡದೆ ಹೊಸ ಅಧ್ಯಕ್ಷರು ಅದನ್ನು ಹಳೆಯ ಬಸ್ ನಿಲ್ದಾಣಕ್ಕೆ ಬದಲಾಯಿಸಲು ತೀರ್ಮಾನಿಸಿದರು. ಆದರೆ ಈ ತೀರ್ಮಾನ ಕಡತದಲ್ಲಿಯೇ ಉಳಿದುಕೊಂಡ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿಯೇ ನಿಲುಗಡೆ ಆರಂಭಿಸಿದವು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಬಾರದೆಂದು ಪೊಲೀಸರು- ಆರ್‌ಟಿಒ ಅಧಿಕಾರಿಗಳು ಪ್ರದರ್ಶಿಸಿದ ಫ್ಲೆಕ್ಸ್ …

ಸ್ಫೋಟಕ ವಸ್ತು ವಶ ಪ್ರಕರಣ:ಕಟ್ಟತ್ತಡ್ಕ ಎಕೆಜಿ ನಗರದ ಕ್ವಾರ್ಟರ್ಸ್‌ಗೆ ಎನ್‌ಐಎ

ದಾಳಿ; ಆರ್‌ಸಿ ಬುಕ್, 3 ವಿಸಿಟಿಂಗ್ ಕಾರ್ಡ್‌ಗಳು ವಶ ಕುಂಬಳೆ: ಮಲಪ್ಪುರಂನ ಕೊಂಡೋಟಿಯಲ್ಲಿ  ಉಗ್ರ ಸ್ಫೋಟ ಸಾಮರ್ಥ್ಯದ  ಒಂದು ಲೋಡ್ ಸ್ಫೋಟಕ ವಸ್ತುಗಳನ್ನು ವಶಪಡಿಸಿ ಕೊಂಡ ಪ್ರಕರಣದ ತನಿಖೆಯಂಗ ವಾಗಿ  ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟತ್ತಡ್ಕ ಎಕೆಜಿ ನಗರ ದಲ್ಲೂ ಎನ್‌ಐಎ ದಾಳಿ ನಡೆಸಿದೆ. ಮೊನ್ನೆ ಬೆಳಿಗ್ಗೆ  ಇಲ್ಲಿಗೆ ತಲುಪಿದ ಐದು ಮಂದಿ ಅಧಿಕಾರಿಗಳ ತಂಡ ಕ್ವಾರ್ಟರ್ಸ್‌ವೊಂದರಲ್ಲಿ  ತಪಾಸಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎಯ ಕಸ್ಟಡಿಯಲ್ಲಿರುವ ಮುಹಮ್ಮದ್ ಸಲೀಂ ಎಂಬಾತನ ಪತ್ನಿ ಹಾಗೂ ಮಕ್ಕಳು ವಾಸಿಸುವ …

ಕೆ.ಎಂ.ಶಾಜಿ ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ

ಕಾಸರಗೋಡು: ರಾಜ್ಯದ ಪಂಚಾಯತ್, ನಗರಸಭೆ ಮತ್ತು ಕಾರ್ಪೋರೇಶನ್ ಒಳಗೊಂಡ ಸ್ಥಳೀಯಾಡಳಿತ ಖಾತೆ ಸಚಿವ ಕೆ.ಎಂ. ಶಾಜಿಯವರಿಗೆ ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಹಿಸಿಕೊಟ್ಟಿದ್ದಾರೆ. ಇದೇ ರೀತಿ ಇತರ ಸಚಿವರುಗಳಾದ ಸನ್ನಿ ಜೋಸೆಫ್‌ರಿಗೆ ಕಣ್ಣೂರು, ಟಿ. ಸಿದ್ದಿಕ್‌ಗೆ ವಯನಾಡ್, ಎ.ಪಿ. ಅನಿಲ್ ಕುಮಾರ್-ಕಲ್ಲಿಕೋಟೆ, ಪಿ.ಕೆ. ಬಷೀರ್- ಮಲಪ್ಪುರಂ, ಎನ್, ಶಂಸುದ್ದೀನ್-ಪಾಲಕ್ಕಾಡ್, ಒ.ಜೆ.ಜನೀಶ್-ತೃಶೂರು, ರೋಜಿ ಎಂ ಜೋನ್-ಎರ್ನಾಕುಳಂ, ಅನೂಪ್ ಜೇಕಬ್ -ಇಡುಕ್ಕಿ, ಮೋನ್ಸ್ ಜೋಸೆಫ್ -ಕೋಟ್ಟಯಂ,  ಎಂ. ಲಿಜು-ಆಲಪ್ಪುಳ, ಪಿ.ಸಿ. ವಿಶ್ವನಾಥ್-ಪತ್ತನಂತಿಟ್ಟ, ಶಿಬು …