ರಾಜ್ಯದಲ್ಲಿ ಶಾಲಾ ಪ್ರವೇಶೋತ್ಸವ ಆರಂಭ: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ

ಕಾಸರಗೋಡು: 2026-27ನೇ ಶೈಕ್ಷಣಿಕ ವರ್ಷ ಇಂದು ಆರಂಭಗೊಂ ಡಿದ್ದು, ಇದರಂತೆ ಒಂದನೇ ತರಗತಿಗಳಿಗಿ ರುವ ಚಿಣ್ಣರ ಪ್ರವೇಶೋತ್ಸವ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇಂದು ಬೆಳಿಗ್ಗೆ ಅದ್ದೂರಿ ಹಾಗೂ ವರ್ಣರಂಜಿತ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದರ ರಾಜ್ಯಮಟ್ಟದ ಉದ್ಘಾಟನೆಯಲ್ಲಿ ತಿರುವನಂತಪುರ ಪಟ್ಟ ಸರಕಾರಿ ಗೇಲ್ಸ್ ಎಚ್‌ಎಸ್‌ಎಸ್‌ನಲ್ಲಿ ಇಂದು ಬೆಳಿಗ್ಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟನೆ ನೆರವೇರಿಸಿದರು. ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅಧ್ಯಕ್ಷತೆ ವಹಿಸಿದರು. ಒಂದನೇ ವರ್ಷಕ್ಕೆ ಸೇರ್ಪಡೆಗೊಳ್ಳುವ ಚಿಣ್ಣರಿಗೆ ವರ್ಣರಂಜಿತ ಟೋಪಿಗಳನ್ನು ತೊಡಿಸಿ ಹಾಗೂ ಸಿಹಿ ತಿಂಡಿ ವಿತರಿಸಿ ಅವರನ್ನು ಶೈಕ್ಷಣಿಕ ಜೀವನಕ್ಕೆ ಆಹ್ವಾನಿಸಲಾ ಯಿತು.ರಾಜ್ಯದಲ್ಲಿ ಒಂದನೇ ತರಗತಿಯಿಂದ ಆರಂಭಗೊಂಡು 12ನೇ ತರಗತಿಯ ತನಕ ಒಟ್ಟು 42 ಲಕ್ಷದಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಎರಡೆಡೆಗಳಲ್ಲಾಗಿ ಇಂದು ಪ್ರವೇಶೋತ್ಸವ ನಡೆಯಿತು. ಇದರಂತೆ ಜಿಲ್ಲಾ ಪಂಚಾಯತ್‌ನ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪ್ರವೇಶೋತ್ಸವ ಚಾಯೋತ್ತ್ ಜಿಎಚ್‌ಎಸ್‌ನಲ್ಲೂ, ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಪ್ರವೇಶೋತ್ಸವ ಪಿ.ಎಂ.ಎಸ್, ಪಿಟಿಎಸ್ ವಿಎಚ್‌ಎಸ್‌ಎಸ್  ಕೈಕೋಟು ಕಡವಿನಲ್ಲಿ ಇಂದು ಬೆಳಿಗ್ಗೆ ನಡೆಯಿತು.

RELATED NEWS

You cannot copy contents of this page