ಸಾರಣೆ ಮೇಸ್ತ್ರಿ ಗ್ಯಾರೇಜ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಸಾರಣೆ ಮೇಸ್ತ್ರಿಯಾದ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೆರುವಾಡ್ ಭಜನಾ ಮಂದಿರ ಸಮೀಪದ ಸತೀಶ್ (35) ಎಂಬವರು ಮೃತಪಟ್ಟ ವ್ಯಕ್ತಿ.  ನಿನ್ನೆ ಮುಂಜಾನೆ 1 ಗಂಟೆ ವೇಳೆ ಪೆರುವಾಡ್‌ನ ಮುಚ್ಚುಗಡೆಗೊಳಿಸಿದ  ಗ್ಯಾರೇಜ್‌ನೊಳಗೆ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಮೊನ್ನೆ ರಾತ್ರಿ 8 ಗಂಟೆ ವೇಳೆ ಸತೀಶ್ ತಾಯಿಗೆ ಫೋನ್ ಕರೆ ಮಾಡಿ ಮಾತನಾಡಿದ್ದ ರೆನ್ನಲಾಗಿದೆ. ಅನಂತರ ಸತೀಶ್ ನಾಪತ್ತೆಯಾಗಿದ್ದು, ಇದರಿಂದ ಮನೆಯವರು ಅವರಿಗೆ ಫೋನ್ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಪೊಲೀಸ್ ಠಾಣೆಗೆ ತಲುಪಿ ಮಾಹಿತಿ ನೀಡಿದ್ದರು. ಪೊಲೀಸರು ಸತೀಶ್‌ರ ಫೋನ್ ಲೊಕೇಶನ್ ಪರಿಶೀಲಿಸಿದಾಗ ಪೆರುವಾಡ್ ಪರಿಸರದಲ್ಲಿರುವುದಾಗಿ ತಿಳಿದುಬಂದಿತ್ತು. ಬಳಿಕ ಮನೆಯವರು ಹಾಗೂ ಸಂಬಂಧಿಕರು ಸತೀಶ್‌ರ ಫೋನ್‌ಗೆ ಕರೆ ಮಾಡುತ್ತಾ  ಹುಡುಕಾಟ ಮುಂದುವರಿಸಿದ್ದರು. ಈಮಧ್ಯೆ ಮುಚ್ಚುಗಡೆಗೊಳಿಸಿದ ಗ್ಯಾರೇಜ್‌ನ ಸಮೀಪಕ್ಕೆ ತಲುಪಿದಾಗ ಸತೀಶ್ ಫೋನ್ ರಿಂಗಣಿಸುವ ಶಬ್ದ ಕೇಳಿಬಂದಿದೆ. ಶಬ್ದ ಕೇಳಿದ ಸ್ಥಳಕ್ಕೆ ತಲುಪಿ ಹುಡುಕಿದಾಗ ಗ್ಯಾರೇಜ್ ನೊಳಗೆ ಮೃತದೇಹ ಕಂಡುಬಂದಿದೆ. ಪೆರುವಾಡ್‌ನ  ಓದೇನನ್ ಬೆಳ್ಚಪ್ಪಾಡ-ಶ್ರೀಮತಿ ದಂಪತಿಯ ಪುತ್ರನಾದ ಮೃತರು ಸಹೋ ದರರಾದ ರಾಜು, ದಿವಾಕರ, ಸಹೋದರಿ ರಜನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸತೀಶ್  ಕ್ರಿಕೆಟ್ ಆಟಗಾರನೂ ಆಗಿದ್ದರು. ಮನೆ ಯವ ರೊಂದಿಗೆ ಹಾಗೂ ನಾಗರಿಕ ರೊಂದಿಗೆ ಉತ್ತಮ ಸೌಹಾರ್ದತೆ ಯಲ್ಲಿದ್ದರು.

RELATED NEWS

You cannot copy contents of this page