ಮನೆಯ ಅಡಿಪಾಯ ಸಮೀಪಗೋಡೆ  ಕುಸಿತ: ಅಪಾಯ ಭೀತಿ

ಕುಂಬಳೆ: ಇಂದು ಮುಂಜಾನೆ ಸುರಿದ ಮಳೆಗೆ ಮನೆಯೊಂದರ ಅಡಿಪಾಯಕ್ಕೆ ಹೊಂದಿಕೊಂಡಿರುವ ಗೋಡೆ ಕುಸಿದು    ಬಿದ್ದಿದೆ. ಇದರಿಂದ ಮನೆ ಅಪಾಯಭೀತಿಯನ್ನು ಎದುರಿಸುತ್ತಿದ್ದು ಕುಟುಂಬ ಆತಂಕಕ್ಕೀಡಾಗಿದೆ. ಕುಂಬಳೆ ಕಂಚಿಕಟ್ಟೆ ದುರ್ಗಾಂಬ ರಸ್ತೆಯ ನಿವಾಸಿ ಹಾವು ಹಿಡಿತಗಾರ ಸುರೇಶ್ ಕೆ.ವಿ ಎಂಬವರ ಮನೆ ಅಪಾಯ ಭೀತಿ ಎದುರಿಸುತ್ತಿದೆ.

ರಸ್ತೆ ಬದಿ ಎತ್ತರದಲ್ಲಿ ಮನೆಯಿದ್ದು ಅಡಿಪಾಯಕ್ಕೆ ಕೆಂಪುಕಲ್ಲು ಕಟ್ಟಿ ಗೋಡೆ ನಿರ್ಮಿಸಲಾಗಿತ್ತು.  ಇಂದು ಮುಂಜಾನೆ ಸುರಿದ ಮಳೆ ವೇಳೆ ಗೋಡೆಯ ಕಲ್ಲುಗಳು ಕುಸಿದುಬಿದ್ದಿದೆ. ಮನೆಯ ಗೋಡೆಯೂ ಬಿರುಕುಬಿಟ್ಟಿದೆಯೆಂದು ಕೆ.ವಿ.ಸುರೇಶ್ ತಿಳಿಸಿದ್ದಾರೆ.

RELATED NEWS

You cannot copy contents of this page